March 21, 2026

ಅನಾಥಾಶ್ರಮದ ಇಬ್ಬರು ಮಕ್ಕಳನ್ನು ದತ್ತು ಪಡೆದ ಸ್ಯಾಂಡಲ್‍ವುಡ್ ನಟಿ

0
Screenshot_2022-02-14-11-58-28-81_680d03679600f7af0b4c700c6b270fe7.jpg

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಶ್ರೀಲೀಲಾ ತಮ್ಮ ಉತ್ತಮ ನಟನೆಯ ಮೂಲಕವಾಗಿ ಮನಸ್ಸಿನಲ್ಲಿ ಜಾಗ ಗಿಟ್ಟಿಸಿಕೊಂಡಿದ್ದರು, ಸದ್ಯ ಅನಾಥಾಶ್ರಮ ಇಬ್ಬರು ಮಕ್ಕಳನ್ನು ದತ್ತು ಪಡೆದುಕೊಳ್ಳುವ ಮೂಲಕವಾಗಿ ಮಾನವೀಯತೆ ಮೆರೆದಿದ್ದಾರೆ.

ಕಿಸ್‌ ಸಿನಿಮಾದ ಮೂಲಕ ಚಂದನವನಕ್ಕೆ ಕಾಲಿಟ್ಟ ಇವರು ನಂತರ ತೆಲುಗಿನಲ್ಲು ಅಭಿಮಾನಿ ಬಳಗವನ್ನು ಗಳಿಸಿಕೊಂಡಿದ್ದಾರೆ, ಸದ್ಯ ಬೈ ಟು ಲವ್ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಿದ್ದಾರೆ ಈ ವೇಳೆ ಮಾತೃಶ್ರೀ ಮನೋವಿಕಾಸ ಕೇಂದ್ರಕ್ಕೆ ಭೇಟಿ ನೀಡಿ ಇಬ್ಬರು ಮಕ್ಕಳನ್ನು ದತ್ತು ಪಡೆದುಕೊಂಡಿದ್ದಾರೆ.

10 ತಿಂಗಳ ಗುರು ಹಾಗೂ ಶೋಭಿತಾ ಎನ್ನುವ ಪುಟ್ಟ ಕಂದಮ್ಮನನ್ನು ದತ್ತು ಪಡೆದಿದ್ದು, ಆ ವೇಳೆ ಬೈ ಟು ಲವ್ ಚಿತ್ರದ ನಿರ್ದೇಶಕ ಹರಿ ಸಂತೋಷ್ ಕೂಡ ಸಾಥ್ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!