March 21, 2026

ಉಳ್ಳಾಲದ‌ ಮುಲ್ಲಾ ಖಾದರ್‌ ನಿಜವಾದ ಮೂರ್ಖ: ಸಂಸದ ಪ್ರತಾಪ್ ಸಿಂಹ

0
Screenshot_2022-02-14-12-01-28-60_680d03679600f7af0b4c700c6b270fe7.jpg

ಮೈಸೂರು: ಉಳ್ಳಾಲದ‌ ಮುಲ್ಲಾ ಖಾದರ್‌ ನಿಜವಾದ ಮೂರ್ಖ, ಮೈಸೂರು ಇತಿಹಾಸದ ಬಗ್ಗೆ ಗೊತ್ತಿಲ್ಲ, ಮಹರಾಜರ ವಂಶಕ್ಕೆ ದ್ರೋಹ ಬಗೆದ ಹೈದರಾಲಿಯ ಮಗ ಟಿಪ್ಪು ಅಂತ ಗೊತ್ತಿಲ್ವ ಎಂದು ಸಂಸದ ಪ್ರತಾಪ್ ಸಿಂಹ ಸೋಮವಾರ ಕಿಡಿ ಕಾರಿದ್ದಾರೆ.

ಮೂರ್ಖರ ಪ್ರಶ್ನೆಗೆ ಉತ್ತರ ಸಿಗುತ್ತಾ ಎಂಬ ಯು.ಟಿ.ಖಾದರ್ ಹೇಳಿಕೆ‌ಗೆ ತಿರುಗೇಟು ನೀಡಿದ ಸಂಸದ ಪ್ರತಾಪ್‌ಸಿಂಹ, ನಿಜವಾದ ಮೂರ್ಖತನ ಪ್ರದರ್ಶನ ಮಾಡ್ತಿರೋದು ಖಾದರ್. ಕೋರ್ಟ್ ತೀರ್ಪು ಬರುವವರೆಗೂ ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯವಾರದು.

ಇವತ್ತು ಹಿಜಾಬ್ ಕೇಳ್ತಾರೆ, ನಾಳೆ ಬುರ್ಕಾ ಹಾಕೊಂಡು ಬರ್ತಾರೆ. ಕ್ಲಾಸ್ ರೂಂ‌ನಲ್ಲಿ ಪ್ರೇಯರ್‌‌ ಹಾಲ್ ಕಟ್ಟಿಸಿಕೊಡಿ ಅಂತಾರೆ. ಮುಂದೊಂದು ದೇಶ ತುಂಡು ಮಾಡಿ ಅಂತಾರೆ. ಎಪ್ಪತ್ತು ವರ್ಷಗಳ ಹಿಂದೆ ಇವರೆಲ್ಲಾ ಇದನ್ನೇ ಮಾಡಿದ್ದು.ಇವರ ಒತ್ತಡಕ್ಕೆ ಮಣಿಯುತ್ತಾ ಹೋದರೆ ದೇಶವನ್ನ ತುಂಡರಿಸುತ್ತಾರೆ.ಶಿಕ್ಷಣ ವ್ಯವಸ್ಥೆಯಲ್ಲಿ ಸಮವಸ್ತ್ರ ಇದೆಯೊ ಇಲ್ಲವೋ.

ಜಗತ್ತಿನ ಎಲ್ಲಾ ದೇಶಗಳಲ್ಲೂ ಸಮವಸ್ತ್ರ ಇದೆ.ಆ ಜಾತಿ ಈ ಜಾತಿ , ಆ ಧರ್ಮ ಈ ಧರ್ಮ ಅಂತ ಭೇದಭಾವ ಇಲ್ಲದೆ ಸಮಾನವಾಗಿ ಜ್ಞಾನಾರ್ಜಾನೆ ಮಾಡಲು ಸಮವಸ್ತ್ರ ಜಾರಿಗೊಳಿಸಿವೆ ಎಂದರು.

Leave a Reply

Your email address will not be published. Required fields are marked *

error: Content is protected !!