“ಗುಜರಾತ್ ಟೈಟಾನ್ಸ್” ಎಂದು ಹೆಸರು ಬದಲಿಸಿದ ಅಹ್ಮದಾಬಾದ್ ಫ್ರಾಂಚೈಸಿ
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ಗೆ ಹೊಸದಾಗಿ ಸೇರ್ಪಡೆಯಾಗಿರುವ ಅಹಮದಾಬಾದ್ ಫ್ರಾಂಚೈಸಿ ತನ್ನ ತಂಡದ ಹೆಸರನ್ನು ಗುಜರಾತ್ ಟೈಟಾನ್ಸ್ ಎಂದು ಬುಧವಾರ ಪ್ರಕಟಿಸಿದೆ.
ಖಾಸಗಿ ಇಕ್ವಿಟಿ ಸಂಸ್ಥೆ ಸಿವಿಸಿ ಕ್ಯಾಪಿಟಲ್ ಒಡೆತನದ ಅಹಮದಾಬಾದ್ ಫ್ರಾಂಚೈಸಿ ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡ, ರಾಜ್ಯದ ಶ್ರೀಮಂತ ಕ್ರಿಕೆಟ್ ಪರಂಪರೆಗೆ ಗೌರವ ಸಲ್ಲಿಸಲು ಈ ಹೆಸರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದೆ.




