May 18, 2026

40 ಲಕ್ಷ ರೂ. ನೀಡಿದರೆ 1 ಕೋಟಿ ರೂ. ನೀಡುವುದಾಗಿ ನಂಬಿಸಿ ವಂಚನೆ

0
Screenshot_2022-02-12-12-01-19-99_680d03679600f7af0b4c700c6b270fe7.jpg

ಚಾಮರಾಜನಗರ/ಕೊಳ್ಳೇಗಾಲ : 40 ಲಕ್ಷ ರೂ. ನೀಡಿದರೆ 1 ಕೋಟಿ ರೂ. ನೀಡುವುದಾಗಿ ನಂಬಿಸಿ ತಮ್ಮಿಂದ 35 ಲಕ್ಷ ರೂ. ಪಡೆದು ಪರಾರಿಯಾಗಿದ್ದಾರೆ ಎಂದು ಖಾಸಗಿ ಆಸ್ಪತ್ರೆಯ ಮ್ಯಾನೇಜಿಂಗ್‌ ಡೈರೆಕ್ಟರ್‌ ಅವರು ನಾಲ್ವರ ವಿರುದ್ಧ ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ಮೈಸೂರಿನ ಪಿನಿಕಲ್‌ ಆಸ್ಪತೆ ಮ್ಯಾನೇಜಿಂಗ್‌ ಡೈರೆಕ್ಟರ್‌ ಶಂಕರ್‌ ( ಮೂಲ ಸ್ಥಳ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಎಲದಳ್ಳಿ) ಎಂಬುವರು, ಶ್ರೀರಂಗಪಟ್ಟಣದ ಮೂಷಾ, ಮತೀನ್‌, ತೆಳ್ಳನೂರು ಗ್ರಾಮದ ಶಿವು ಹಾಗೂ ಕಣ್ಣೂರು ಗ್ರಾಮದ ಮಹೇಶ್‌ ವಿರುದ್ಧ ವಂಚನೆ ಪ್ರಕರಣದ ದೂರು ನೀಡಿದ್ದಾರೆ.

ಶಂಕರ್‌ ಅವರ ಕಾರಿನ ಚಾಲಕ ರಘುವಿಗೆ ಹನೂರು ತಾಲೂಕಿನ ಕಣ್ಣೂರು ಗ್ರಾಮದ ಮಹೇಶ್‌, ಕೊಳ್ಳೇಗಾಲ ತಾಲೂಕಿನ ತೆಳ್ಳನೂರು ಗ್ರಾಮದ ಶಿವು ಪರಿಚಯವಾಗಿ, 2021ನೇ ಅಕ್ಟೋಬರ್‌ನಲ್ಲಿ ಮತೀನ್‌ ಎಂಬ ವ್ಯಕ್ತಿ ಪರಿಚಯವಿದ್ದು, ಆತನಿಗೆ 40 ಲಕ್ಷ ರೂ. ನೀಡಿದರೆ, ಅದರ ಬದಲಿಗೆ 1 ಕೋಟಿ ನೀಡುತ್ತಾರೆ ಎಂದು ತಿಳಿಸಿದರು. ಇದನ್ನು ನಂಬಿ ನಾವು ಹಣ ನೀಡಿದೆವು ಎಂದು ದೂರುದಾರರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!