February 3, 2026

ಬಂಟ್ವಾಳ: ಚೂರಿ ಇರಿತ ಪ್ರಕರಣ, ಇಬ್ಬರು ಆರೋಪಿಗಳ ಬಂಧನ

0
image_editor_output_image-828752216-1644647231475.jpg

ಬಂಟ್ವಾಳ: ಬಾರೊಂದರಲ್ಲಿ ಕುಡಿದು ಕ್ಷುಲಕ ಕಾರಣಕ್ಕೆ ಜಗಳ ಮಾಡಿಕೊಂಡು ಚೂರಿ ಇರಿತ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಬಂಧಿಸಿದ್ದು ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಕಾವಳಮೂಡೂರು ನಿವಾಸಿ ಪುರುಷ ಯಾನೆ ಪುರುಷೋತ್ತಮ ಹಾಗೂ ಬಿ.ಕಸಬಾ ನಿವಾಸಿ ಧನುಷ್ ಯಾನೆ ಧನಂಜಯ ಬಂಧಿತ ಆರೋಪಿಗಳು.

ಬಂಟ್ವಾಳ ಬೈಪಾಸ್ ಜಂಕ್ಷನ್ ಬಳಿ ಫೆ. 9ರಂದು ಯಾವುದೋ ಕ್ಷುಲಕ ಕಾರಣಕ್ಕೆ ಯುವಕರ ಮಧ್ಯೆ ಜಗಳ ನಡೆದಿದ್ದು, ಈ ವೇಳೆ ಚೂರಿಯಿಂದ ಇರಿದುಕೊಂಡಿದ್ದಾರೆ. ಇರಿತದ ಪರಿಣಾಮ ಕಿಶೋರ್ ಹಾಗೂ ದಯಾನಂದ್ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ.

ಪ್ರಕರಣದ ಆರೋಪಿಗಳಾದ ಅರ್ಬಿಗುಡ್ಡೆ ನಿವಾಸಿಗಳಾದ ಸುಚಿತ್, ಸಚಿನ್, ಧನು ಹಾಗೂ ಪುರುಷ ವಿರುದ್ಧ ಪ್ರಕರಣ ದಾಖಲಾಗಿತ್ತು. ಅವರ ಪತ್ತೆಗಾಗಿ ಎಸ್.ಪಿ.ಹೃಷಿಕೇಶ್ ಸೋನಾವಣೆ ನಿರ್ದೇಶನದಂತೆ ಬಂಟ್ವಾಳ ಡಿ.ವೈ.ಎಸ್.ಪಿ.ಪ್ರತಾಪ್ ಸಿಂಗ್ ಥೋರಾಟ್ ಅವರ ಮಾರ್ಗದರ್ಶನ ದಲ್ಲಿ ಬಂಟ್ವಾಳ ನಗರ ಪೊಲೀಸ್ ಇನ್ಸ್ ಪೆಕ್ಟರ್ ವಿವೇಕಾನಂದ ನೇತ್ರತ್ವದ ತಂಡ ರಚನೆ ಮಾಡಿದ್ದರು.

ಇನ್ನು ನಗರ ಠಾಣಾ ಪೋಲೀಸ್ ಇನ್ಸ್ಪೆಕ್ಟರ್ ವಿವೇಕಾನಂದ ನೇತ್ರತ್ವದ ಎಸ್.ಐ.ಅವಿನಾಶ್ ಅವರ ತಂಡ ಆರೋಪಿಗಳಿಬ್ಬರನ್ನು ಬಂಧಿಸಿದ್ದು ಉಳಿದ ಆರೋಪಿಗಳಿಗೆ ಶೋಧ ಕಾರ್ಯ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!