June 10, 2026

ಗಾನ ಕೋಗಿಲೆ ಲತಾ ಮಂಗೇಶ್ಕರ್‌ ಅವರ ಅಂತ್ಯಕ್ರಿಯೆ ವೇಳೆ:  ನಟ ಶಾರುಖ್ ಖಾನ್‌  ಗಾಳಿಯಲ್ಲಿ ಊದಿದ ದೃಶ್ಯ ಭಾರೀ  ಟ್ರೋಲ್‌   ಮತ್ತು ವಿವಾದ

0
image_editor_output_image-1318821472-1644289405735

ಮುಂಬೈ: ಗಾನ ಕೋಗಿಲೆ ಲತಾ ಮಂಗೇಶ್ಕರ್‌ ಅವರ ಅಂತ್ಯಕ್ರಿಯೆ ಸಂದರ್ಭದಲ್ಲಿ ಬಾಲಿವುಡ್‌ ನಟ ಶಾರುಖ್ ಖಾನ್‌ ಅವರು ಪ್ರಾರ್ಥಿಸಿದ ರೀತಿಯು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ ಆಗಿದ್ದು, ವಾಗ್ವಾದಕ್ಕೆ ಕಾರಣವಾಗಿದೆ.  

ಶಿವಾಜಿ ಪಾರ್ಕ್‌ನಲ್ಲಿ ಭಾನುವಾರ ನಡೆದ ಅಂತ್ಯಕ್ರಿಯೆಯಲ್ಲಿ ಶಾರುಖ್ ಅವರು ತಮ್ಮ ಮ್ಯಾನೇಜರ್‌ ಪೂಜಾ ದದ್ಲಾನಿ ಅವರೊಂದಿಗೆ ಪಾಲ್ಗೊಂಡು ಪ್ರಾರ್ಥನೆ ಸಲ್ಲಿಸಿದ್ದರು. ಈ ವೇಳೆ ಅವರು ಮಾಸ್ಕ್‌ ತೆರೆದು ದುಷ್ಟಶಕ್ತಿಗಳನ್ನು ದೂರವಿಡಲು ಗಾಳಿಯಲ್ಲಿ ಊದಿದರು.

ಈ ವಿಡಿಯೊ ವೈರಲ್ ಆಗಿದ್ದು ವಾಗ್ವಾದಕ್ಕೆ ಕಾರಣವಾಗಿದೆ. ಹರಿಯಾಣದ ಬಿಜೆಪಿ ಐಟಿ ಘಟಕದ ಉಸ್ತುವಾರಿ ಅರುಣ್‌ ಯಾದವ್‌ ಅವರು ‘ಕ್ಯಾ ಇಸ್ನೆ ಥೂಕಾ ಹೈ’ (ಅವರು ಉಗುಳಿದ್ದಾರೆಯೇ?) ಎಂದು ಪ್ರಶ್ನಿಸಿ ವಿವಾದ ಸೃಷ್ಟಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!