March 21, 2026

ಸುಳ್ಯ: ಪ್ರಕೃತಿಯ ವೈಶಿಷ್ಟ್ಯಕ್ಕೆ ಸಾಕ್ಷಿಯಾದ ಬಾಳೆಗೊನೆ

0
IMG-20220206-WA0001.jpg

ಸುಳ್ಯ: ಕೆಲವು ಬಾರಿ ಪ್ರಕೃತಿಯಿಂದ ವಿವಿಧ ಅಚ್ಚರಿಗಳು ಕಾಣಸಿಗುತ್ತದೆ. ಅದೇ ರೀತಿಯ ಘಟನೆಯೊಂದು ಇದೀಗ ಸುಳ್ಯದಲ್ಲಿ ಕಾಣಸಿಕ್ಕಿದೆ.

ಸುಳ್ಯ ತಾಲೂಕಿನ ತೊಡಿಕಾನ ಗ್ರಾಮದ ದೀಪಕ್ ಎಂಬವರ ಮನೆಯ ತೋಟದಲ್ಲಿ ಕಡಿದ ಬಾಳೆಗಿಡದಲ್ಲಿ ಬಾಳೆಗೊನೆ ಬಂದಿದ್ದು ನೋಡುಗರಿಗೆ ಅಚ್ಚರಿ ಮೂಡಿಸಿದೆ.

ಫೆಬ್ರವರಿ 5ರಂದು ತೋಟದ ಕೆಲಸಕ್ಕೆಂದು ಹೋದ ಕಾರ್ಮಿಕರು ಈ ದೃಶ್ಯ ಕಂಡಿದ್ದು ಚಕಿತರಾಗಿ ತಮ್ಮ ಮೊಬೈಲ್ ನಲ್ಲಿ ಫೋಟೋ ಕ್ಲಿಕ್ಕಿಸಿ ತಂದು ದೀಪಕ್ ರವರಿಗೆ ತೋರಿಸಿರುತ್ತಾರೆ ಎನ್ನಲಾಗಿದೆ. ಗೊನೆಯಲ್ಲಿ ಸುಮಾರು ನಲವತ್ತಕ್ಕೂ ಹೆಚ್ಚು ಕಾಯಿಗಳು ಇದ್ದು ಕದಳಿ ಬಾಳೆಗೆ ಸೇರಿದ ಗಿಡವಾಗಿದೆ ಎಂದು ದೀಪಕ್ ರವರು ಪತ್ರಿಕೆಗೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!