ಪೊಲೀಸ್ ಉದ್ಯೋಗ ನೇಮಕಾತಿ ಹಗರಣ:
3 ಪೊಲೀಸರು ಸೇರಿದಂತೆ 9 ಮಂದಿಯ ಬಂಧನ
ಅಸ್ಸಾಂ: ಪೊಲೀಸ್ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಮೂವರು ಪೊಲೀಸರು ಸೇರಿದಂತೆ ಒಂಬತ್ತು ಜನರನ್ನು ಸೋಮವಾರ ಬಂಧಿಸಲಾಗಿದೆ.
ಈ ವರ್ಷದ ಸೆಪ್ಟೆಂಬರ್‌ನಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪ್ರಕ್ರಿಯೆಯಲ್ಲಿ ಹಗರಣ ಪತ್ತೆಹಚ್ಚಿದ ನಂತರ, ಕರೀಮ್‌ಗಂಜ್ ಜಿಲ್ಲಾ ಪೊಲೀಸರು ಸೆಪ್ಟೆಂಬರ್ 26 ರಂದು ಪ್ರಕರಣ ದಾಖಲಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಪೊಲೀಸರು ಒಂಬತ್ತು ಜನರನ್ನು ಬಂಧಿಸಿದ್ದಾರೆ ಎಂದು ಕರೀಮ್‌ಗಂಜ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಪದ್ಮನಾಭ್ ಬರುವಾ ತಿಳಿಸಿದ್ದಾರೆ.
“ಈ ಹಿಂದೆ ನಾವು ಏಳು ಜನರನ್ನು ಬಂಧಿಸಿದ್ದೆವು ಮತ್ತು ಸೋಮವಾರ ಇನ್ನೂ ಒಂಬತ್ತು ಜನರನ್ನು ಬಂಧಿಸಲಾಯಿತು. ಒಂಬತ್ತು ಜನರಲ್ಲಿ ಮೂವರು ಪೊಲೀಸ್ ಸಿಬ್ಬಂದಿ ಮತ್ತು ಆರು ಅಭ್ಯರ್ಥಿಗಳು. ಎಲ್ಲಾ ಸಾಕ್ಷ್ಯಗಳನ್ನು ಮತ್ತು ತನಿಖೆಗಳನ್ನು ವಿಶ್ಲೇಷಿಸಿದ ನಂತರ ನಾವು ಜನರನ್ನು ಬಂಧಿಸಿದ್ದೇವೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪದ್ಮನಾಭ್ ಬರುವಾ ಹೇಳಿದ್ದಾರೆ.





