ಪದ್ಮಶ್ರೀ ಪ್ರಶಸ್ತಿ ಮುಡಿಗೇರಿಸಿಕೊಂಡ,ಸಾಧಕ ಪ್ರಗತಿಪರ ಕೃಷಿಕನಿಗೆ F.I.T.U ಕಾರ್ಮಿಕ ಸಂಘಟನೆ ವತಿಯಿಂದ ಸನ್ಮಾನ
ವಿಟ್ಲ: ಹುಟ್ಟು ಕೃಷಿಕನಾದ, ಶ್ರೀ ಮಹಾಲಿಂಗ ನಾಯ್ಕರವರು, ತನ್ನ ಕೃಷಿರಂಗದಲ್ಲಿರುವ ದುಡಿಮೆಗೆ ಇತರರನ್ನು ಆಶ್ರಯಿಸದೆ, ಸ್ವತಃ ಕಾರ್ಮಿಕನಾಗಿ ದುಡಿದು ಅನುಭವ ಹೊಂದಿದ ಪಳಗಿದ ಕೈ ಯಾಗಿದ್ದು ತನ್ನ ಬೆಳೆಗಳಿಗೆ ನೀರಿನ ಸಮಸ್ಯೆ ಎದುರಾದಾಗ ತಾನು ಏಕಾಂತ ಪರಿಶ್ರಮಿಸಿಕೊಂಡು, ಹಗಲಿರುಳು ಬೆವರಿಳಿಸಿ, ಕನಿಷ್ಠ 25 ಮೀಟರ್ ಉದ್ದದಿಂದ ಸುಮಾರು 72 ಮೀಟರ್ ಉದ್ದದವರೆಗಿನ ಬರೋಬ್ಬರಿ ಏಳು ಸುರಂಗಗಳನ್ನು ಕೊರೆದು ನಿರ್ಮಿಸಿದ ಕರ್ಮಯೋಗಿ.
ಇವರ ಅಪ್ರತಿಮ ಸಾಧನೆಯ ಫಲವಾಗಿ ಇಂದು ಪದ್ಮಶ್ರೀ ಪ್ರಶಸ್ತಿಯು ಅವರನ್ನು ಹುಡುಕಿ ಬಂದಿದ್ದು, ಈ ಪ್ರಯುಕ್ತ, ಪದ್ಮಶ್ರೀ ಪ್ರಶಸ್ತಿ ಭಾಜನರಾದ ಶ್ರೀಮಾನ್ ಮಹಾಲಿಂಗ ನಾಯ್ಕ ರವರ ಮನೆಗೆ ತೆರಳಿದ, ಕಾರ್ಮಿಕ ಸಂಘಟನೆಯಾಗಿರುವ,
ಫೆಡರೇಷನ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (F.I.T.U.) ಇದರ ರಾಜ್ಯಾಧ್ಯಕ್ಷ ಸುಲೈಮಾನ್ ಕಲ್ಲರ್ಪೆ ಯವರ ನೇತೃತ್ವದ ನಿಯೋಗವು ಅವರನ್ನು ಗೌರವಿಸಿ ಕಾಣಿಕೆ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯ ವಿಟ್ಲ ಘಟಕದ ಕಾರ್ಯದರ್ಶಿ ಶ್ರೀ ಅಬ್ದುಲ್ಲ ಕುಂಞಿ ವೆಲ್ಫೇರ್ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಎ. ಕೆ. ಕುಕ್ಕಾಜೆ ಮತ್ತು ವೆಲ್ಫೇರ್ ಪಕ್ಷದ ಪುತ್ತೂರು ವಲಯ ಕಾರ್ಯದರ್ಶಿ ಇಸ್ಹಾಕ್ ನೀರ್ಕಜೆಯವರು ನಿಯೋಗದಲ್ಲಿ ಉಪಸ್ಥಿತರಿದ್ದರು.




