March 21, 2026

ಮಂಗಳೂರು: ಯುವಕನನ್ನು ಅಟ್ಟಾಡಿಸಿಕೊಂಡು ಬಂದು ಹತ್ಯೆಗೆ ಯತ್ನ: ಯುವಕ ಅನಾಸ್ ಸ್ಥಿತಿ ಗಂಭೀರ

0
image_editor_output_image1911207752-1643804805362

ಮಂಗಳೂರು: ಯುವಕನೋರ್ವನನ್ನು ಅಟ್ಟಾಡಿಸಿ ಮಾರಕಾಸ್ತ್ರದಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಮಂಗಳೂರು ಹೊರವಲಯದ ಸುರತ್ಕಲ್‌ನ ಕಾಟಿಪಳ್ಳದ 6 ನೇ ಬ್ಲಾಕ್‌ನಲ್ಲಿ ಫೆ.1 ರಂದು ತಡರಾತ್ರಿ ನಡೆದಿದೆ.

ಗಾಯಗೊಂಡ ಯುವಕನನ್ನು ಅನಾಸ್(29) ಎನ್ನಲಾಗಿದೆ.

ಗಂಭೀರ ಗಾಯಗೊಂಡ ಆತನನ್ನು ಮುಕ್ಕ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅನಾಸ್, ಕಾಟಿಪಳ್ಳದಲ್ಲಿ ಮೊಬೈಲ್ ಅಂಗಡಿಯಲ್ಲಿ ಕೆಲಸಕ್ಕಿದ್ದು, ರಾತ್ರಿ ಮನೆ ಬಾಡಿಗೆ ವಿಚಾರದಲ್ಲಿ ಮಾತುಕತೆ ನಡೆಸುವ ಸಲುವಾಗಿ 6ನೇ ಬ್ಲಾಕಿನ ಅಬುಬಕ್ಕರ್ ಎಂಬವರ ಮನೆಗೆ ತೆರಳಿದ್ದ. ಮನೆಯ ಹೊರಗೆ ನಿಂತು ಮಾತನಾಡುತ್ತಿದ್ದಾಗ ಕಾರಿನಲ್ಲಿ ಅಲ್ಲಿಗೆ ಬಂದ ಚಾರು ಅವಾಚ್ಯ ಶಬ್ದಗಳಿಂದ ಬೈದು, ಬೆನ್ನ ಹಿಂದೆ ಇರಿಸಿದ್ದ ಮಾರಕಾಸ್ತ್ರದಿಂದ ತಲವಾರು ತೆಗೆದು ಯದ್ವಾತದ್ವಾ ಹಲ್ಲೆ ಮಾಡಿದ್ದು, ಈ ವೇಳೆ ಅನಾಸ್ ಓಡಲು ಪ್ರಯತ್ನಿಸಿದ್ದಾನೆ ಎನ್ನಲಾಗಿದೆ.

ಆಗ ಕಾರಿನಲ್ಲಿ ಬಂದಿದ್ದ ರವೂಫ್, ಮುಸ್ತಾಫ ಯಾನೆ ಅಪ್ಪು ಮತ್ತು ಇತರರು ಅಡ್ಡಗಟ್ಟಿ ಯದ್ವಾತದ್ವಾ ಹಲ್ಲೆ ನಡೆಸಿದ್ದು, ಗಂಭೀರ ಗಾಯಗೊಂಡಿದ್ದ ಅನಾಸ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಈ ವೇಳೆ ಆರೋಪಿಗಳು ಕಾರಿನಿಂದ ಕಾಲ್ಕಿತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಆರೋಪಿಗಳಾದ ಚಾರು, ರವೂಫ್, ಅಕ್ಕಿ, ಮುಸ್ತಾಫ ಮತ್ತಿತರರ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ

Leave a Reply

Your email address will not be published. Required fields are marked *

You may have missed

error: Content is protected !!