May 16, 2026

ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಬೆಳ್ತಂಗಡಿ ಚರ್ಚ್ ಶಾಲೆಯ ವಿದ್ಯಾರ್ಥಿನಿ ಮೃತ್ಯು

0
image_editor_output_image-917814348-1643781345732.jpg

ಬೆಳ್ತಂಗಡಿ: ಲಿವರ್ ಜರ್ಝರಿಗೊಂಡು ಜೀವನ್ಮರಣ ಹೋರಾಟದೊಂದಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಪುಟ್ಟ ಬಾಲಕಿ ಇಂದು ಬೆಳಗ್ಗೆ ನಿಧನರಾದರು.

ಪಡಂಗಡಿ ಗ್ರಾಮದ ಬದ್ಯಾರ್ ನಿವಾಸಿ ವಿಲಿಯಂ ಹಾಗೂ ಅನಿತಾ ಡಿಸಿಲ್ವ ಅವರ ಮಗಳು ಏಂಜಲ್ ಅನುಷಾ ಡಿಸಿಲ್ವ (11) ಇಂದು ಬೆಳಗ್ಗೆ ಬೆಂಗಳೂರಿನ ಆಸ್ಟರ್ ಸಿಎಂಐ ಆಸ್ಪತ್ರೆಯಲ್ಲಿ ನಿಧನರಾದ ಬಾಲಕಿ. ವಾರದ ಹಿಂದೆ ಏಕಾಏಕಿ ಅನಾರೋಗ್ಯಕ್ಕೀಡಾದ ಬಾಲಕಿಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅರಸಿನ ಕಾಮಾಲೆ ಕಾಯಿಲೆಯಿಂದ ಬಾಲಕಿಯ ಲಿವರ್ ಜರ್ಝರಿಗೊಂಡಿದ್ದು , ಲಿವರ್ ಕಸಿ ಮಾಡಲು ಸೋಮವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಬಾಲಕಿ ಏಂಜಲ್ ಅನುಷಾ ಡಿಸಿಲ್ವ ಬೆಳ್ತಂಗಡಿ ಚರ್ಚ್ ಶಾಲೆಯ 7 ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು , ಪಠ್ಯ ಹಾಗೂ ಪಠ್ಯತೇರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದಳು.

Leave a Reply

Your email address will not be published. Required fields are marked *

error: Content is protected !!