ಮಂಗಳೂರು ಖಾಸಗಿ ಸಿಟಿ ಬಸ್‌ನಲ್ಲಿ ನೇತಾಡಿಕೊಂಡು ಪ್ರಯಾಣಿಸಿದ ವಿದ್ಯಾರ್ಥಿನಿಯರು: ಬಸ್ ನಿರ್ವಾಹಕನಿಗೆ ದಂಡ

ಮಂಗಳೂರು: ಸ್ಟೇಟ್ ಬ್ಯಾಂಕ್‌ನಿಂದ ಬೋಂದೆಲ್ ನಡುವೆ ಸಂಚರಿಸುವ ಖಾಸಗಿ ಸಿಟಿ ಬಸ್‌ನ ಫುಟ್‌ಬೋರ್ಡ್‌ನಲ್ಲಿ ವಿದ್ಯಾರ್ಥಿನಿಯರು ನೇತಾಡಿಕೊಂಡು ಪ್ರಯಾಣಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಂಚಾರಿ ಠಾಣೆ ಪೊಲೀಸರ್ ಖಾಸಗಿ ಬಸ್ ನಿರ್ವಾಹಕನಿಗೆ 500 ರೂ.ದಂಡ ವಿದಿಸಿದ್ದಾರೆ.
ಖಾಸಗಿ ಸಿಟಿ ಬಸ್‌ನ ಫುಟ್‌ಬೋರ್ಡ್‌ನಲ್ಲಿ ವಿದ್ಯಾರ್ಥಿನಿಯರು ನೇತಾಡಿಕೊಂಡು ಪ್ರಯಾಣಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಮಂಗಳೂರು ಸಂಚಾರ ಪೊಲೀಸರು ಬಸ್ ನಿರ್ವಾಹಕನಿಗೆ 500ರೂ ದಂಡವನ್ನು ವಿಧಿಸಿದ್ದಾರೆ.
ಇನ್ನು ವಿದ್ಯಾರ್ಥಿನಿಯರು ಅಪಾಯಕಾರಿ ರೀತಿಯಲ್ಲಿ ಪ್ರಯಾಣಿಸುತ್ತಿರುವುದಕ್ಕೆ ಖಾಸಗಿ ಬಸ್ ನಿರ್ವಾಹಕನ ನಿರ್ಲಕ್ಷವೇ ಕಾರಣ ಎಂದು ದೂರಲಾಗಿದೆ.