April 12, 2025

ಅಶ್ಲೀಲ ವೆಬ್‌ಸೈಟ್‌ ವೀಕ್ಷಿಸುತ್ತಿದ್ದಾಗ ತನ್ನದೇ  ವೀಡಿಯೋ ಕಂಡು ದಂಗಾದ ಯುವಕ: ದೂರು ದಾಖಲು

0

ಬೆಂಗಳೂರು: ಯುವಕನೊಬ್ಬ ಅಶ್ಲೀಲ ವೆಬ್‌ಸೈಟ್‌ ವೀಕ್ಷಿಸುತ್ತಿದ್ದಾಗ ತನ್ನದೇ  ವೀಡಿಯೋ ಕಂಡು  ದಂಗಾಗಿ ಪೋಸರ ಮೊರೆ ಹೋದ ಘಟನೆ ವರದಿಯಾಗಿದೆ.

ಈ ಸಂಬಂಧ ಆಸ್ಟಿನ್‌ಟೌನ್‌ನ 25 ವರ್ಷದ ಯುವಕ  ಕೇಂದ್ರ ವಿಭಾಗದ ಸೆನ್‌  ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

ಖಾಸಗಿ ಕಂಪೆನಿಯ ಉದ್ಯೋಗಿಯಾಗಿರುವ ಈತ ತನ್ನ ಗೆಳತಿ ಜತೆ ನಗರದ ಹೊಟೇಲೊಂದರಲ್ಲಿ ಖಾಸಗಿ ಕ್ಷಣಗಳನ್ನು ಕಳೆದಿದ್ದಾರೆ. ಆ ದೃಶ್ಯಗಳನ್ನು ಯಾರೋ ಸೆರೆ ಹಿಡಿದು,  ವಿವಿಧ ಅಶ್ಲೀಲ ವೆಬ್‌ಸೈಟ್‌ಗಳಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಇದು ಜ.21ರಂದು ಯುವಕನ ಗಮನಕ್ಕೆ ಬಂದಿದೆ. ಬಳಿಕ ಬೇರೆ ವೆಬ್‌ಸೈಟ್‌ಗಳಲ್ಲೂ ಈ ವೀಡಿಯೋ ಇರುವುದು ಪತ್ತೆಯಾಗಿದೆ.

 

 

Leave a Reply

Your email address will not be published. Required fields are marked *

error: Content is protected !!