May 16, 2026

4 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ: 14 ವರ್ಷದ ಬಾಲಕನ ಬಂಧನ

0
Screenshot_2022-02-01-11-17-06-33_680d03679600f7af0b4c700c6b270fe7.jpg

ಚೆನ್ನೈ: ತಮಿಳುನಾಡಿನ ಟುಟಿಕೋರಿನ್ ಜಿಲ್ಲೆಯಲ್ಲಿ ತನ್ನ ಗ್ರಾಮದಲ್ಲಿ ನಾಲ್ಕು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ 14 ವರ್ಷದ ಹುಡುಗನನ್ನು ಬಂಧಿಸಲಾಗಿದೆ. ಬಾಲಕ ಟ್ಯುಟಿಕೋರಿನ್‌ನ ಖಾಸಗಿ ಶಾಲೆಯೊಂದರಲ್ಲಿ 9ನೇ ತರಗತಿ ವಿದ್ಯಾರ್ಥಿಯಾಗಿದ್ದು, ನೆರೆಮನೆಯ ಬಾಲಕಿ ಮೇಲೆ ದೌರ್ಜನ್ಯ ಎಸಗಿದ್ದಾನೆ.

ತಂದೆಯಿಲ್ಲದ ಆತ ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದ. ಶನಿವಾರ ಬಾಲಕಿ ಹಾಗೂ ಆಕೆಯ ಸಹೋದರ ಆರೋಪಿ ಬಾಲಕನ ಮನೆ ಮುಂದೆ ಆಟವಾಡುತ್ತಿದ್ದರು. ಆಕೆಯೊಂದಿಗೆ ಆಟವಾಡುವ ನೆಪದಲ್ಲಿ ಆರೋಪಿ ಬಾಲಕಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ. ನಂತರ ಆಕೆಯನ್ನು ಕೆಲವು ಮುಳ್ಳಿನ ಪೊದೆಗಳ ಬಳಿಯ ಏಕಾಂತ ಸ್ಥಳಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ಆದಾದ ಬಳಿಕ ತಾಯಿ ಸ್ನಾನ ಮಾಡಿಸುವ ವೇಳೆ ಬಾಲಕಿ ನೋವಿನಿಂದ ಅಳುತ್ತಿದ್ದ ಬಳಿಕ ದೌರ್ಜನ್ಯ ನಡೆದಿರುವುದು ಬೆಳಕಿಗೆ ಬಂದಿದೆ. ಆಕೆಯನ್ನು ವಿಲತ್ತಿಕುಲಂ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ಬಾಲಕಿ ಮೇಲೆ ಲೈಂಗಿಕ ಕಿರುಕುಳವಾಗಿರುವುದನ್ನು ದೃಢಪಡಿಸಿದರು.

ತಾಯಿ ನೀಡಿರುವ ದೂರಿನ ಆಧಾರದ ಮೇಲೆ ವಿಲತ್ತಿಕುಲಂ ಮಹಿಳಾ ಪೊಲೀಸರು ಆರೋಪಿ ವಿರುದ್ಧ ಸೂಕ್ತ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ದೂರು ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!