ಕೇಂದ್ರ ಬಜೆಟ್ 2022 ಮಂಡನೆ: ಇ-ಪಾಸ್ ಪೋರ್ಟ್ ಜಾರಿ
ದಿಲ್ಲಿ: ಕೇಂದ್ರ ಸರ್ಕಾರದ 2022-23 ನೇ ಸಾಲಿನ ಬಜೆಟ್ ಸಂಸತ್‌ನಲ್ಲಿ ಮಂಡನೆ ಆರಂಭವಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡುತ್ತಿದ್ದಾರೆ.
ಪಿಎಂ ಆವಾಜ್ ಯೋಜನೆಗೆ 80 ಸಾವಿರ ಕೋಟಿ ರುಪಾಯಿ ಮೀಸಲು. ಇ-ಪಾಸ್ ಪೋರ್ಟ್ ಜಾರಿ.ಚಿಪ್ ಒಳಗೊಂಡ ಹೊಸ ತಂತ್ರಜ್ಞಾನದೊಂದಿಗೆ ಇ-ಪಾಸ್ ಪೋರ್ಟ್ ಜಾರಿಗೆ ನಿರ್ಧಾರ.
25 ಸಾವಿರ ಅನವಶ್ಯಕ ನಿಯಮಗಳು ರದ್ದು. 1,483 ಅನುಪಯುಕ್ತ ಕಾನೂನು ರದ್ದು. ಲೈಸೆನ್ಸ್ ರಾಜ್ ಕಿತ್ತು ಹಾಕಲು ಕ್ರಮ. ಗ್ರಾಮ ಸೌಕರ್ಯಕ್ಕೆ ವಿಶೇಷ ಅನುದಾನ.
400 ಹೊಸ ತಲೆಮಾರಿನ ವಂದೇ ಭಾರತ್ ರೈಲುಗಳನ್ನು ತರಲಾಗುವುದು