ಕೇಂದ್ರ ಬಜೆಟ್ 2022 Live: ಕಾವೇರಿ, ಪೆನ್ನಾರ್ ಸೇರಿದಂತೆ 5 ನದಿಗಳ ಜೋಡಣೆಗೆ ಕೇಂದ್ರ ಸರ್ಕಾರ ಸಮ್ಮತಿ
ನವದೆಹಲಿ: ಕೇಂದ್ರ ಬಜೆಟ್ 2022ರ ಮಂಡನೆ ವೇಳೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಹತ್ವದ ಘೋಷಣೆ ಮಾಡಿದ್ದು, ಕಾವೇರಿ, ಪೆನ್ನಾರ್ ಸೇರಿದಂತೆ 5 ನದಿಗಳ ಜೋಡಣೆಗೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದೆ ಎಂದು ಹೇಳಿದ್ದಾರೆ.
ಕಾವೇರಿ, ಪೆನ್ನಾರ್ ಸೇರಿದಂತೆ ದೇಶದ ಪ್ರಮುಖ 5 ನದಿಗಳ ಜೋಡಣೆಗೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದ್ದು, ಕೃಷ್ಣಾ-ಪೆನ್ನಾರ್ ನದಿ, ನರ್ಮದಾ-ಗೋದಾವರಿ, ಗೋದಾವರಿ-ಕೃಷ್ಣ ಜೋಡಣೆಗೂ ಅನುಮೋದನೆ ನೀಡಲಾಗಿದೆ. ಈ 5 ನದಿಗಳ ಜೋಡಣೆಗೆ ಕೇಂದ್ರ ಬಜೆಟ್ ನಲ್ಲಿ 44,605 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗುತ್ತದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ನೀರಾವರಿ ವಿಚಾರವಾಗಿ ಸಾಕಷ್ಟು ರಾಜ್ಯಗಳು ಪಕ್ಕದ ರಾಜ್ಯಗಳೊಂದಿಗೆ ವಿವಾದದಲ್ಲಿ ತೊಡಗಿದ್ದು, ಕೇಂದ್ರ ಸರ್ಕಾರದ ನದಿ ಜೋಡಣೆ ಯೋಜನೆ ಈ ವಿವಾದಗಳಿಗೆ ತೆರೆ ಎಳೆಯುವ ಭರವಸೆ ವ್ಯಕ್ತಪಡಿಸಲಾಗುತ್ತಿದೆ.