February 3, 2026

ಉಪ್ಪಿನಂಗಡಿ ಲಾಡ್ಜ್ ನಲ್ಲಿ ವಿಟ್ಲ ನಿವಾಸಿ ಆತ್ಮಹತ್ಯೆ ಪ್ರಕರಣ:
ಸಾಲದಿಂದ ಮನನೊಂದು ಆತ್ಮಹತ್ಯೆ- ಪ್ರಕರಣ ದಾಖಲು

0
IMG_20220126_223135.jpg

ಉಪ್ಪಿನಂಗಡಿ: ಉಪ್ಪಿನಂಗಡಿ ಲಾಡ್ಜ್ ನಲ್ಲಿ ವ್ಯಕ್ತಿಯೋರ್ವರು ಮಾಡಿಕೊಂಡಿರುವ ಘಟನೆಗೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ವಿಟ್ಲ ಮುಡ್ನೂರು ಗ್ರಾಮದ ಕುಂಡಡ್ಕ ಅರಿಮೂಲೆ ನಿವಾಸಿ ಅಬ್ದುಲ್ ರಹಿಮಾನ್ ಅವರ ಪುತ್ರ ಮಹಮ್ಮದ್ ಶರೀಫ್ (37) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಇವರು ಕೆಲವು ವರ್ಷಗಳ ಹಿಂದೆ ವಿಟ್ಲದ ಕುಂಡಡ್ಕ ಎಂಬಲ್ಲಿ ವಾಸವಿದ್ದು, ಬಳಿಕ ಉಪ್ಪಿನಂಗಡಿಯ ನೆಕ್ಕಿಲಾಡಿ ಎಂಬಲ್ಲಿ ಬಾಡಿಗೆ ಮನೆ ಮಾಡಿ ವಾಸವಾಗಿದ್ದರು.

ಕೂಲಿ ಕೆಲಸ ಮಾಡುತ್ತಿದ್ದ ಅವರು ಆರ್ಥಿಕವಾಗಿ ಮಾನಸಿಕವಾಗಿ ಮನನೊಂದಿದ್ದರು.
ಇವರು ನಿನ್ನೆ ಉಪ್ಪಿನಂಗಡಿ ಲಾಡ್ಜ್ ನಲ್ಲಿ ರೂಂ ಪಡೆದಿದ್ದರು. ಇಂದು ರೂಂ ಚೆಕ್ ಔಟ್ ಮಾಡಬೇಕಿತ್ತು. ಅದರೆ ಅವರ ರೂಂ ಬಂದ್ ಆಗಿದ್ದ ಕಾರಣ ಲಾಡ್ಜ್ ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದರು. ಈ ವೇಳೆ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಹಣದ ಅಡಚಣೆಯೇ ಆತ್ಮಹತ್ಯೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!