ಎಸ್ ವೈ ಎಸ್ ಪುತ್ತೂರು ಸೆಂಟರ್ ಹಾಗೂ ಟೌನ್ ಬ್ರಾಂಚ್ ವತಿಯಿಂದ 73ನೇ ಗಣರಾಜ್ಯೋತ್ಸವ ಆಚರಣೆ.
ಪುತ್ತೂರು: 73 ನೇ ಗಣರಾಜ್ಯೋತ್ಸವದ ಅಂಗವಾಗಿ ಸುನ್ನೀ ಯುವಜನ ಸಂಘ ಕರ್ನಾಟಕ ಇದರ ಪುತ್ತೂರು ಸೆಂಟರ್ ಮತ್ತು ಟೌನ್ ಬ್ರಾಂಚ್ ವತಿಯಿಂದ ಧ್ವಜಾರೋಹಣ,ಹಾಗೂ ಸಂವಿಧಾನದ ಕುರಿತು ಮಾಹಿತಿ ಕಾರ್ಯಾಗಾರ ನಡೆಯಿತು.
ಸಮಿತಿಯ ಗೌರವಾಧ್ಯಕ್ಷರಾದ ಆದಂ ಹಾಜಿ ಪಡೀಲ್ ಮತ್ತು ಸಂಘಟನೆಯ ಹಿರಿಯ ನೇತೃತ್ವ ಇಸ್ಮಾಯಿಲ್ ಹಾಜಿ ಬನ್ನೂರು ರವರ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಿತು. ಸೆಂಟರ್ ಅಧ್ಯಕ್ಷ ಅಬೂಶಝ ಖಾಸಿಮಿ ಕೂರ್ನಡ್ಕ ರವರು ಸೇರಿದ ಗಣ್ಯರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕೆಸಿಎಫ್ ನಾಯಕ ಕಲಂದರ್ ಕಬಕ ರವರು ಸಂವಿಧಾನದ ಮೌಲ್ಯಗಳ ಕುರಿತು ಮಾತನಾಡಿ ಅದನ್ನು ಸಂರಕ್ಷಿಸುವಲ್ಲಿ ನಾವೆಲ್ಲರೂ ಜಾತಿಮತಭೇಧವಿಲ್ಲದೆ ತಯ್ಯಾರಾಗಬೇಕೆಂದು ಕರೆಕೊಟ್ಟರು.
ಎಸ್ ವೈ ಎಸ್ ರಾಜ್ಯ ನಾಯಕರಾದ ಹಮೀದ್ ಹಾಜಿ ಬೀಜಕೊಚ್ಚಿ ಶುಭ ಹಾರೈಸಿ ಮಾತನಾಡಿದರು.
ಪುತ್ತೂರು ಸೆಂಟರ್ ಉಪಾಧ್ಯಕ್ಷ,ಇಸ್ಮಾಯಿಲ್ ಹಾಜಿ ಹಸನ್ ನಗರ,ಎಸ್ ವೈಎಸ್ ಕರ್ನಾಟಕ ರಾಜ್ಯ ಟೀಂ ಇಸಾಬ ಡೈರಕ್ಟರ್ ಇಕ್ಬಾಲ್ ಬಪ್ಪಳಿಗೆ, ಈಸ್ಟ್ ಜಿಲ್ಲಾ ಸಾಂತ್ವನ ಕಾರ್ಯದರ್ಶಿ ಸ್ವಾಲಿಹ್ ಮುರ,ಜಿಲ್ಲಾ ನಾಯಕ ಅಬ್ದುಲ್ಲಾ ಮುಸ್ಲಿಯಾರ್ ಬನ್ನೂರು,ಕೆಸಿಎಫ್ ನಾಯಕ ಇಬ್ರಾಹಿಂ (ಇಬ್ಬ) ಬಪ್ಪಳಿಗೆ,ಪುತ್ತೂರು ಸೆಂಟರ್ ಪ್ರಧಾನ ಕಾರ್ಯದರ್ಶಿ ಅಬೂಬಕರ್ ನರಿಮೊಗರು,ಸೆಂಟರ್ ಟೀಂ ಇಸಾಬ ಕಾರ್ಯದರ್ಶಿ ಶಾಹುಲ್ ಹಮೀದ್ ಕಬಕ, ಸೆಂಟರ್ ಸಂಘಟನಾ ಕಾರ್ಯದರ್ಶಿ ರಫೀಕ್ ಬೀಟಿಗೆ, ಸೆಂಟರ್ ದಅವಾ ಕಾರ್ಯದರ್ಶಿ ಉಮರ್ ಕೆಪಿ ನರಿಮೊಗರು,
ಸೆಂಟರ್ ಸೋಷಿಯಲ್ ಕಾರ್ಯದರ್ಶಿ ಅಬ್ದುರ್ರಝಾಕ್ ಕರಿಮಜಲ್
ಸೆಂಟರ್ ಎಕ್ಸ್‌ಕ್ಯೂಟಿವ್ ಸದಸ್ಯರಾದ ಅಬ್ದುಲ್ ಅಝೀಝ್ ಕೆಮ್ಮಾಯಿ,
ಬಶೀರ್ ಕೂರ್ನಡ್ಕ, ಟೌನ್ ಬ್ರಾಂಚ್ ಅದ್ಯಕ್ಷ ಅಬ್ದುಲ್ ಖಾದರ್ ಮರಿಕೆ ಅಬ್ದುಲ್ ಮಜೀದ್ ಬನ್ನೂರು ಸಹಿತ ಅನೇಕ ಗಣ್ಯರು ಉಪಸ್ಥಿತರಿದ್ದರು. ಕೊನೆಯಲ್ಲಿ ಪಾನೀಯ ಮತ್ತು ಸಿಹಿ ತಿಂಡಿ ವಿತರಣೆ ನಡೆಯಿತು.




