ನಟಿ ಜೂಹಿ ಚಾವ್ಲಾ ವಿರುದ್ಧ ವಿಧಿಸಲಾಗಿದ್ದ 20 ಲಕ್ಷ ರೂ. ದಂಡವನ್ನು 2 ಲಕ್ಷಕ್ಕೆ ಇಳಿಸಿದ ಹೈಕೋರ್ಟ್
ಮುಂಬೈ: ಬಾಲಿವುಡ್ ನಟಿ ಜೂಹಿ ಚಾವ್ಲಾ ಅವರ ವಿರುದ್ಧ 5ಜಿ ತಂತ್ರಜ್ಞಾನದ ಬಿಡುಗಡೆಗೆ ಸಂಬಂಧಿಸಿದಂತೆ ವಿಧಿಸಲಾಗಿದ್ದ 20 ಲಕ್ಷ ರೂ. ದಂಡವನ್ನು ಈಗ ಹೈಕೋರ್ಟ್ 2 ಲಕ್ಷಕ್ಕೆ ಇಳಿಸಿದೆ.
ಭಾರತದಲ್ಲಿ 5ಜಿ ಅಳವಡಿಕೆ ವಿರುದ್ಧದ ಮೊಕದ್ದಮೆಗಾಗಿ ನಟಿ ಜೂಹಿ ಚಾವ್ಲಾ ಅವರಿಗೆ ಹೈಕೋರ್ಟ್ 20 ಲಕ್ಷ ರೂ ದಂಡ ವಿಧಿಸಿತ್ತು. ಇದೀಗ ಈ ದಂಡ ಪ್ರಮಾಣವನ್ನು 2 ಲಕ್ಷಕ್ಕೆ ಇಳಿಸಲು ದೆಹಲಿ ಹೈಕೋರ್ಟ್ ಮುಂದಾಗಿದೆ. ಆದರೆ ಅವರು ಸಾರ್ವಜನಿಕರಿಗಾಗಿ ಒಂದಿಷ್ಟು ಸೇವೆ ಮಾಡಬೇಕು ಎಂದು ಕೋರ್ಟ್ ಷರತ್ತು ವಿಧಿಸಿದೆ. ನ್ಯಾಯಾಂಗದ ಸಮಯವನ್ನು ವ್ಯರ್ಥ ಮಾಡಿದ್ದಕ್ಕಾಗಿ ಜೂಹಿ ಚಾವ್ಲಾ ಸೇರಿದಂತೆ ಇತರ ಇಬ್ಬರ ಮೇಲೆ ದಂಡ ವಿಧಿಸಿತ್ತು.





