November 23, 2026

ಹಡ್ಕದಲ್ಲಿ ಅಪರಿಚಿತ ವ್ಯಕ್ತಿಯ ತಲೆಬುರುಡೆ, ಅಸ್ಥಿಪಂಜರ ಪತ್ತೆ

0
image_editor_output_image-1599771422-1635224663727.jpg

ಬ್ರಹ್ಮಾವರ: ಇಲ್ಲಿನ ಯಡಾಡಿ ಮತ್ಯಾಡಿ ಗ್ರಾಮದ ಕ್ಯಾಸನಮಕ್ಕಿ ಬಳಿಯ ಹಡ್ಕದಲ್ಲಿ ವ್ಯಕ್ತಿಯೊಬ್ಬರ ಮಾಲೀಕತ್ವದ ಜಮೀನಿನಲ್ಲಿ ಅಪರಿಚಿತ ವ್ಯಕ್ತಿಯ ತಲೆಬುರುಡೆ ಮತ್ತು ಅಸ್ಥಿಪಂಜರದ ಅವಶೇಷಗಳು ಅಕ್ಟೋಬರ್ 25 ರ ಭಾನುವಾರದಂದು ಪತ್ತೆಯಾಗಿವೆ.

ಸ್ಥಳೀಯರಾದ ಸುದರ್ಶನ್ ಎಂಬುವವರ ಮಾಲೀಕತ್ವದ ಹಾಡಿಯಲ್ಲಿ ಕೆಲಸದಲ್ಲಿ ತೊಡಗಿದ್ದ ಕಾರ್ಮಿಕರು ತರಗೆಲೆ ಹಾಗೂ ಇತರ ತ್ಯಾಜ್ಯಗಳನ್ನು ತೆರವುಗೊಳಿಸುತ್ತಿದ್ದಾಗ ಅವರಿಗೆ ತಲೆಬುರುಡೆ, ಕೈ ಕಾಲುಗಳ ಮೂಳೆಗಳು ಮತ್ತು ಬಟ್ಟೆಗಳು ಕಂಡುಬಂದಿದೆ.

ಸ್ಥಳಕ್ಕೆ ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಅನಂತಪದ್ಮನಾಭ, ಕೋಟ ಠಾಣಾಧಿಕಾರಿ ಸಂತೋಷ್ ಬಿ ಪಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Leave a Reply

Your email address will not be published. Required fields are marked *

You may have missed

error: Content is protected !!