ಬೆಳ್ತಂಗಡಿ: ವಿದ್ಯಾರ್ಥಿನಿಯ ಆನ್ ಲೈನ್ ತರಗತಿಯ ಮೊಬೈಲಿಗೆ ಅಶ್ಲೀಲ ಸಂದೇಶ ಕಳುಹಿಸಿ ಲೈಂಗಿಕ ಕಿರುಕುಳ:
ಆರೋಪಿ ದಿಲೀಪ್ ಮದ್ದಡ್ಕ ವಿರುದ್ದ ಫೋಕ್ಸೋ ಪ್ರಕರಣ ದಾಖಲು
ಬೆಳ್ತಂಗಡಿ: ಅಪ್ರಾಪ್ತ 9ನೇ ತರಗತಿಗೆ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ತಾಲೂಕಿನ ನಿವಾಸಿ ದಿಲೀಪ್ ಮದ್ದಡ್ಕ ಆರೋಪಿಯಾಗಿದ್ದು, ಸಮೀಪದ ಸರಕಾರಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಗೆ ಪರಿಚಯದ ಆರೋಪಿತನಾದ ದಿಲೀಫ್ ಎಂಬಾತನು ಅಪ್ರಾಪ್ತ ಬಾಲಕಿಯ ಬಳಿಯಿದ್ದ ಆನ್ಲೈನ್ ಕ್ಲಾಸ್ಗೆ ಉಪಯೋಗಿಸುತ್ತಿದ್ದ ಮೊಬೈಲ್ ಪೋನ್ ನಂಬ್ರವನ್ನು ಪಡೆದುಕೊಂಡು ಮೊಬೈಲ್ ಮೂಲಕ ಕರೆಮಾಡಿ ಲೈಂಗಿಕ ಕಿರುಕುಳ ನೀಡಿದ್ದಲ್ಲದೇ, ಬೇಡದ ರೀತಿಯಲ್ಲಿ ಸಂದೇಶ ಮತ್ತು ವಾಟ್ಸಪ್ ಮೂಲಕ ಅಶ್ಲೀಲ ಚಿತ್ರಗಳನ್ನು ಕಳುಹಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.