March 20, 2026

ಮೂಡಬಿದಿರೆ: ಹಿಟ್ ಆ್ಯಂಡ್ ರನ್: ಪಾದಚಾರಿ ಮೃತ್ಯು

0
IMG_20220118_154408.jpg

ಮೂಡಬಿದಿರೆ: ಕಲ್ಲಮುಂಡ್ಕೂರು ಪೇಟೆಯ ರಸ್ತೆಯಲ್ಲಿ ಪಾದಾಚಾರಿಯೋರ್ವರು ಹೋಗುತ್ತಿದ್ದಾಗ ರಿಡ್ಸ್ ಕಾರೊಂದು ಢಿಕ್ಕಿ ಹೊಡೆದ ಪರಿಣಾಮವಾಗಿ ಪಾದಾಚಾರಿ ಮೃತಪಟ್ಟ ಘಟನೆ ಭಾನುವಾರ ರಾತ್ರಿ ವೇಳೆ ನಡೆದಿದೆ.

ಸಂಪಿಗೆಯ ಇಡ್ಡಬೆಟ್ಟು ನಿವಾಸಿ ಹರೀಶ್(50) ಅಪಘಾತಕ್ಕೆ ಬಲಿಯಾದ ವ್ಯಕ್ತಿ.

ಹರೀಶ್ ಅವರು ಎಂದಿನಂತೆ ಸಂಜೆ ವೇಳೆ ಸಂಪಿಗೆಯಿಂದ ಕಲ್ಲಮುಂಡ್ಕೂರು ಪೇಟೆಗೆ ಹೋಗಿದ್ದು ನಂತರ ಹಿಂತಿರುಗಿ ನಡೆದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ ರಿಟ್ಸ್ ಕಾರು ಢಿಕ್ಕಿ ಹೊಡೆದಿದ್ದು ಈ ಸಂದರ್ಭ ನೆಲಕ್ಕೆ ಬಿದ್ದ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಢಿಕ್ಕಿ ಹೊಡೆದ ಕಾರು ಪರಾರಿಯಾಗಿದೆ.
ಮೂಡುಬಿದಿರೆ ಪೊಲೀಸ್ ಉಪ ನಿರೀಕ್ಷಕ ಸುದೀಪ್ ಅವರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!