ಕಾಲುವೆಗೆ ಬಿದ್ದು ಕಾರು ಅಪಘಾತ: ನಾಲ್ವರು ಮೃತ್ಯು
ಬಾಗಲಕೋಟೆ: ಕಾರು ಪಲ್ಟಿಯಾಗಿ ಸ್ಥಳದಲ್ಲೇ ನಾಲ್ವರು ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಲೋಕಾಪುರ ಪಟ್ಟಣದ ಬಳಿ ನಡೆದಿದೆ.
ಮೃತಪಟ್ಟವರನ್ನು ಬಡಕಿ ಗ್ರಾಮದ ನಿವಾಸಿ ಕಾರು ಚಾಲಕ ಸುನೀಲ್ (24), ಗುಡಮ್ಮನಾಳ ಗ್ರಾಮದವರಾದ ಮಹಾದೇವ್ ಪಾಟೀಲ್ (27), ಎರಿತಾತಾ ಕಂಬಾರ್ (26) ಹಾಗೂ ವಿಜಯ್ (26) ಎಂದು ತಿಳಿದು ಬಂದಿದೆ.
ಮುಧೋಳದಿಂದ ರಾಮದುರ್ಗ ಕಡೆಗೆ ಬರುತ್ತಿದ್ದ ಕಾರು ಲೋಕಾಪುರದ ಸಮೀಪ ರಸ್ತೆಯಿಂದ ಕಾಲುವೆಗೆ ಪಲ್ಟಿಯಾಗಿದೆ ಎನ್ನಲಾಗಿದೆ. ಎಲ್ಲರೂ ರಾಮದುರ್ಗ ತಾಲೂಕಿನವರು ಎಂದು ತಿಳಿದು ಬಂದಿದೆ. ಗಾಯಗೊಂಡಿರುವವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಲೋಕಾಪೂರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಲೋಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




