2022 ರ ಐಪಿಎಲ್ ಪಂದ್ಯಕ್ಕೆ ಹೊಸ 2 ತಂಡಗಳು ಸೇರ್ಪಡೆ!

ಯುಎಇ: ಐಪಿಎಲ್ 2022ರ ಎರಡು ಹೊಸ ತಂಡಗಳ ಖರೀದಿಗೆ ಘಟಾನುಘಟಿ ಕಂಪೆನಿಗಳ ನಡುವೆ ಬಿಡ್ಡಿಂಗ್ ಶುರುವಾಗಿದ್ದು, ಖ್ಯಾತ ಫುಟ್ಬಾಲ್ ಕ್ಲಬ್ ಮ್ಯಾಂಚೆಸ್ಟರ್, ಬಾಲಿವುಡ್ ಸ್ಟಾರ್ ರಣ್ವೀರ್ ಸಿಂಗ್ ಹಾಗೂ ದೀಪಿಕಾ ಕೂಡ ತಂಡ ಖರೀದಿಸುತ್ತಾರೆ ಎನ್ನಲಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ 2022ರ ಎರಡು ಹೊಸ ತಂಡಗಳ ಖರೀದಿಗೆ ಘಟಾನುಘಟಿ ಕಂಪೆನಿಗಳ ನಡುವೆ ಹಣಾಹಣಿ ಆರಂಭವಾಗಿದೆ. ಈ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮಾಹಿತಿ ಹಂಚಿಕೊಂಡಿದ್ದು, ಇನ್ನೇನು ಕೆಲವೇ ಕ್ಷಣಗಳಲ್ಲಿ ಬಿಡ್ಡಿಂಗ್ ಶುರುವಾಗಲಿದೆ ಎಂದು ಹೇಳಿದೆ. ಈ ಮೂಲಕ ಐಪಿಎಲ್ 2022 ಆವೃತ್ತಿಗಾಗಿ ಇಂದು ಎರಡು ಹೊಸ ತಂಡಗಳು ಸೇರ್ಪಡೆಯಾಗಲಿದ್ದು, ಅವುಗಳ ಹೆಸರು ಕೂಡ ಇಂದೇ ಘೋಷಣೆಯಾಗಲಿದೆ.

ಖ್ಯಾತ ಫುಟ್ಬಾಲ್ ಕ್ಲಬ್ ಮ್ಯಾಂಚೆಸ್ಟರ್ ಕೂಡ ಐಪಿಎಲ್ ತಂಡ ಖರೀದಿ ಮಾಡುತ್ತಾರೆ ಎಂದು ಹೇಳಲಾಗುತ್ತಿದ್ದು, ಗೌತಮ್ ಅದಾನಿ ಮಾಲಕತ್ವದ ಅದಾನಿ ಸಮೂಹ ಮತ್ತು ಸಂಜೀವ್ ಗೊಯೆಂಕಾ ಮಾಲಕತ್ವದ ಆರ್‌ಪಿಎಸ್‌ಜಿ ಸಮೂಹ ಸದ್ಯದ ಬಿಡ್ಡರ್‌ಗಳ ಪೈಕಿಯಲ್ಲಿದೆ.
ಬಿಸಿಸಿಐ ನಿಯಮಗಳ ಪ್ರಕಾರ ಒಂದು ಕಂಪೆನಿಯಾಗಲೀ, ವ್ಯಕ್ತಿಯಾಗಲೀ ವೈಯಕ್ತಿಕವಾಗಿ ಅಥವಾ ಗರಿಷ್ಠ ಮೂವರು ಒಗ್ಗೂಡಿ ಯಾವುದೇ ತಂಡದ ಮೇಲೆ ಹಕ್ಕು ಚಲಾಯಿಸಬಹುದು. ಒಂದು ವೇಳೆ ಒಬ್ಬ ವ್ಯಕ್ತಿ ಅಥವಾ ಒಂದು ಕಂಪೆನಿ ತಂಡದ ಖರೀದಿಗೆ ಮುಂದಾಗುವುದಾದರೆ ಅದರ ವಾರ್ಷಿಕ ವಹಿವಾಟು ಕನಿಷ್ಠ 3,000 ಕೋಟಿ ರೂ. ಇರಬೇಕು. ಮೂವರು ಒಗ್ಗೂಡಿ ಖರೀದಿಸುವುದಾದರೆ ಪ್ರತಿಯೊಬ್ಬರ ತಲಾ ವಾರ್ಷಿಕ ಆದಾಯ ಕನಿಷ್ಠ 2,500 ಕೋಟಿ ರೂ. ಇರಬೇಕಾಗುತ್ತದೆ.
3,000 ಕೋಟಿಗಿಂತ ಹೆಚ್ಚಿನ ಆದಾಯ ಇರುವ ಕಂಪನಿಗಳಿಗೆ ಮಾತ್ರ ಬಿಡ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಬಿಸಿಸಿಐ ಅವಕಾಶ ನೀಡಿದೆ. ಒಟಿಟಿ ಡಾಕ್ಯುಮೆಂಟ್ ಅನ್ನು ತೆಗೆದುಕೊಳ್ಳುವುದು ಯುಎಸ್ ಮೂಲದ ಗ್ಲೇಜರ್ ಕುಟುಂಬವು ಫ್ರಾಂಚೈಸಿಗಾಗಿ ಔಪಚಾರಿಕ ಬಿಡ್ ಮಾಡುತ್ತದೆ ಎಂಬುದಕ್ಕೆ ಯಾವುದೇ ಗ್ಯಾರಂಟಿಯಿಲ್ಲವಾದರೂ, ಬಿಸಿಸಿಐ ನಿಯಮದ ಪ್ರಕಾರ ಐಪಿಎಲ್ ಬಿಡ್‌ನಲ್ಲಿ ಭಾಗವಹಿಸುವುದಾದರೆ ಭಾರತದಲ್ಲಿ ತನ್ನ ಕಂಪನಿಯನ್ನು ಸ್ಥಾಪಿಸಬೇಕಾಗುತ್ತದೆ. ಒಟಿಟಿ ದಾಖಲಾತಿಯು ವಿದೇಶಿ ಸಂಸ್ಥೆಯ ಬಿಡ್ ಯಶಸ್ವಿಯಾಗಬೇಕಾದರೆ ಭಾರತದಲ್ಲಿ ಕಂಪನಿಯನ್ನು ಸ್ಥಾಪಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸುತ್ತದೆ.