February 1, 2026

ನರಗುಂದ: ಮುಸ್ಲಿಂ ವ್ಯಕ್ತಿಯ ಹತ್ಯೆ ಪ್ರಕರಣ:
ಸಂಘಪರಿವಾರದ ನಾಲ್ವರ ಬಂಧನ

0
Screenshot_20220119-132433_Facebook.jpg

ನರಗುಂದ: ಗದಗ ಜಿಲ್ಲೆಯ ನರಗುಂದ ತಾಲೂಕಿನಲ್ಲಿ ನರಗುಂದ ನಿವಾಸಿ ಸಮೀರ್ ಶಹಪುರ(19) ಎಂಬ ಯುವಕನನ್ನು ಕೊಲೆಗೈದು ಇನ್ನೋರ್ವನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳಾದ ಬಜರಂಗದಳದ ಮುಖಂಡ ಸಹಿತ ನಾಲ್ವರು ಕಾರ್ಯಕರ್ತರನ್ನು ನರಗುಂದ ಪೊಲೀಸರು ಬಂಧಿಸಿದ್ದಾರೆ.

ಸ್ಥಳೀಯ ಬಜರಂಗದಳದ ಮುಖಂಡನಾದ ಸುಬೇದಾರ್ ಓಣಿಯ ಗುತ್ತಿಗೆದಾರ ಸಂಜು ಮಾರುತಿ ನಲವಡಿ, ಕಾರ್ಯಕರ್ತರಾದ ನರಗುಂದ ಪಟ್ಟಣದ ಸಿದ್ದನಬಾವಿ ಓಣಿ ನಿವಾಸಿ ಮಲ್ಲಿಕಾರ್ಜುನ ಅಲಿಯಾಸ್ ಗುಂಡ್ಯ ಮುತ್ತಪ್ಪ ಹಿರೇಮಠ, ಚನ್ನಬಸಪ್ಪ ಅಲಿಯಾಸ್ ಚನ್ನಪ್ಪ ಚಂದ್ರಶೇಖರ ಅಕ್ಕಿ ಹಾಗೂ ವಾಸವಿ ಕಲ್ಯಾಣ ಮಂಟಪ ಬಳಿ ನಿವಾಸಿ ಸಕ್ರಪ್ಪ ಹನುಮಂತಪ್ಪ ಕಾಕನೂರು ಬಂಧಿತ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!