ಕರ್ನಾಟಕ ರಾಜ್ಯ ಇರ್ಫಾನೀಸ್ ಅದ್ಯಕ್ಷರಾಗಿ ಶೇಖ್ ಇರ್ಫಾನಿ ಪುನರಾಯ್ಕೆ
ವಿಟ್ಲ: ಚಪ್ಪಾರಪಡವು ಜಾಮಿಆ ಇರ್ಫಾನಿಯಾದ ಬಿರುದುದಾರಿ ಕರ್ನಾಟಕದ ಇರ್ಫಾನಿಗಳ ಸಂವಾದ ಕರ್ನಾಟಕ ಜಂ ಇಯ್ಯತುಲ್ ಇರ್ಫಾನಿಯೀನ್ ಇದರ ಅದ್ಯಕ್ಷರಾಗಿ ಶೇಖ್ ಮುಹಮ್ಮದ್ ಇರ್ಫಾನಿ, ಫೈಝಿ, ಅಲ್ ಅಝ್ಅರಿ ಪುನರಾಯ್ಕೆಯಾಗಿದ್ದಾರೆ.
ಇತ್ತೀಚೆಗೆ ಮಾರಿಪಳ್ಳದ ಮೌಲಾ ಮೆಮೋರಿಯಲ್ ಅಕಾಡೆಮಿಯಲ್ಲಿ ಕೇಂದ್ರ ಸಮಿತಿಯ ರಿಟೈನಿಂಗ್ ಆಫೀಸರ್ ಮುಹಮ್ಮದ್ ರಫೀಕ್ ಫೈಝಿ ಇರ್ಫಾನಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.
ಉಪಾಧ್ಯಕ್ಷರಾಗಿ ಝುಬೈರ್ ಇರ್ಫಾನಿ, ಸಲೀಂ ಫೈಝಿ ಇರ್ಫಾನಿ ಮೂಡಿಗೆರೆ, ಪ್ರದಾನ ಕಾರ್ಯದರ್ಶಿಯಾಗಿ ಸವಾದ್ ಫೈಝಿ ಇರ್ಫಾನಿ, ಕಾರ್ಯದರ್ಶಿಯಾಗಿ ಶಾಫಿ ಫೈಝಿ ಇರ್ಫಾನಿ ಕಕ್ಕಿಂಜೆ, ಕೋಶಾಧಿಕಾರಿಯಾಗಿ ಸೈಯ್ಯದ್ ಶರೀಫ್ ತಂಙಲ್ ಬುಖಾರಿ ಅಲ್ ಇರ್ಫಾನಿ ಅವರು ಆಯ್ಕೆಯಾದರು.
21 ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆರಿಸಲಾಯಿತು. ಝುಬೈರ್ ಇರ್ಫಾನಿ ಸ್ವಾಗತಿಸಿ, ಸವಾದ್ ಇರ್ಫಾನಿ ವಂದಿಸಿದರು. ಶೇಖ್ ಮುಹಮ್ಮದ್ ಇರ್ಫಾನಿ ನಿರೂಪಿಸಿದರು.




