February 1, 2026

ಧಾರ್ಮಿಕ ಸ್ಥಳಗಳ ಸ್ವರೂಪ ಸಂರಕ್ಷಣಾ ಮಸೂದೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಂಕಿತ

0
image_editor_output_image-1527871637-1635150490689.jpg

ಬೆಂಗಳೂರು: ಧಾರ್ಮಿಕ ಸ್ಥಳಗಳ ಸ್ವರೂಪ ಸಂರಕ್ಷಣಾ ಮಸೂದೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಂಕಿತ ಹಾಕಿದ್ದಾರೆ.

ಇದರಿಂದಾಗಿ ದೇವಾಲಯಗಳನ್ನು ಹಠಾತ್ತನೆ ನೆಲಸಮ ಮಾಡುವ ಅಧಿಕಾರಿಗಳ ಸ್ವಯಂ ಪ್ರಕ್ರಿಯೆಗೆ ತಡೆ ಬಿದ್ದಿದೆ. ಕಳೆದ ವಿಧಾನಮಂಡಲ ಅಧಿವೇಶನದಲ್ಲಿ, ಈ ಮಸೂದೆಯನ್ನು ಅಂಗೀಕರಿಸಿ ನಂತರ ರಾಜ್ಯಪಾಲರ ಒಪ್ಪಿಗೆಗಾಗಿ ಕಳುಹಿಸಿಕೊಡಲಾಗಿತ್ತು. ಈಗ ದೇವಾಲಯಗಳ ಸ್ವರೂಪ ಸಂರಕ್ಷಣಾ ಮಸೂದೆ ಜಾರಿಗೆ ಈಗ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮೈಸೂರಿನ ನಂಜನಗೂಡು ಬಳಿ ದೇವಾಲಯವನ್ನು ಹಠಾತ್ತನೆ ನೆಲಸಮ ಮಾಡಿದ್ದ ವಿಚಾರ ವಿಧಾನ ಮಂಡಲದ ಉಭಯ ಸದನಗಳಲ್ಲಿ ಬಾರಿ ಕೋಲಾಹಲದ ಚರ್ಚೆಗೆ ಗ್ರಾಸವಾಗಿತ್ತು. ಅಂತರ ನಂತರ ನೆಲಸಮಗೊಂಡ ಜಾಗದಲ್ಲಿ ದೇವಾಲಯ ನಿರ್ಮಿಸುವುದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು.

ಅಧಿಕಾರಿಗಳ ಉದ್ಧಟತನದಿಂದ ಇಂತಹ ದ ಘಟನೆಗಳು ಮುಂದೆ ನಡೆಯದಂತೆ ಧಾರ್ಮಿಕ ಸ್ಥಳಗಳ ಸ್ವರೂಪ ಸಂರಕ್ಷಣೆ ಮಾಡುವ ಮಸೂದೆಯನ್ನು ವಿಧಾನಮಂಡಲದ ಉಭಯ ಸದನಗಳಲ್ಲಿ ಸರ್ಕಾರ ಮಂಡನೆ ಮಾಡಿತ್ತು ನಂತರ ಅಂಗೀಕರಿಸಿತ್ತು.

Leave a Reply

Your email address will not be published. Required fields are marked *

error: Content is protected !!