February 4, 2026

ಪುತ್ತೂರು ಪೊಲೀಸ್ ಠಾಣೆಯ ಎ.ಎಸ್.ಐ ಗೆ  ಮೂವರು ವ್ಯಕ್ತಿಗಳು ಹಲ್ಲೆ ಹಾಗೂ ಜಾತಿ ನಿಂದನೆ ಆರೋಪದಡಿ ಪ್ರಕರಣ ದಾಖಲು:
ದಲಿತ ಸಂಘಟನೆ ಪತ್ರಿಕಾಗೋಷ್ಠಿ ವೇಳೆ ಬೆಳಕಿಗೆ ಬಂದ ಘಟನೆ

0
IMG_20220116_211525.jpg

ಸುಳ್ಯ: ಜ.4ರಂದು ಪುತ್ತೂರು ಬಪ್ಪಳಿಗೆ ಟೆಲಿಕಾಂ ವಸತಿಗೃಹದಲ್ಲಿ ವಾಸ್ತವ್ಯ ಹೊಂದಿರುವ ಸುಳ್ಯ ಪೊಲೀಸ್ ಠಾಣೆಯ ಎ.ಎಸ್.ಐ ಗಂಗಾಧರ್ ರವರ ಮೇಲೆ ಹಲ್ಲೆ ಮತ್ತು ಜಾತಿ ನಿಂಧನೆ ಪ್ರಕರಣ ನಡೆದಿದೆ ಎಂದು ತಡವಾಗಿ ಬೆಳಕಿಗೆ ಬಂದಿದೆ.

ಪುತ್ತೂರು ಪರಿಸರದ ಪ್ರಸಾದ್, ಪವನ್, ಅಜೇಯ್ ಅವರು ಆರೋಪಿಗಳು ಎನ್ನಲಾಗಿದೆ.

ಘಟನೆಯ ವಿವರ:  
ಎ.ಎಸ್.ಐ ಗಂಗಾಧರ್ ಅವರು ಜ.೪ರಂದು ಕರ್ತವ್ಯ ಮುಗಿಸಿ ಮನೆಗೆ ಬಂದಿದ್ದ ಸಂಬಂಧಿಕರಿಗೆ ಮದ್ಯ ಖರೀದಿಸಲು ಸಂತೋಷ್ ವೈನ್ ಶಾಪ್‌ಗೆ ಹೋಗಿದ್ದ ವೇಳೆ ಮದ್ಯದಂಗಡಿಯಲ್ಲಿದ್ದ ಪರಿಚಯದ ಪ್ರಸಾದ್ ಮತ್ತು ಪವನ್ ಎಂಬವರು ನೆಹರುನಗರದ ಕೇಶವ ಎಂಬವರಿಗೆ ಹಲ್ಲೆ ನಡೆಸಿರುವ ಕುರಿತು ವಿಚಾರಿಸಿದರು ಎನ್ನಲಾಗಿದೆ.  ಈ ವೇಳೆ ಪ್ರಸಾದ್ ಮತ್ತು ಪವನ್ ರವರು ಎ.ಎಸ್.ಐ ಗಂಗಾಧರ್ ಅವರನ್ನು ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂಧನೆ ಮಾಡಿದ್ದಲ್ಲದೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪ ಕೇಳಿಬಂದಿದೆ.

ಬಳಿಕ ಗಾಯಗೊಂಡ ಗಂಗಾಧರ್ ಅವರು ಆಸ್ಪತ್ರೆಗೆ ಹೋಗಲೆಂದು ವಾಹನದ ಬಳಿ ಬಂದಾಗ ಅಲ್ಲಿಗೆ ಬಂದ ಇನ್ನೋರ್ವ ಅಜಯ್ ಎಂಬವರು ನನ್ನ ವಿಡಿಯೋ ಮಾಡುವುದನ್ನು ನೋಡಿ ಪ್ರಶ್ನಿಸಿದಾಗ ಅಜಯ್ ಎಂಬವರು ಜಾತಿ ನಿಂಧನೆ ಮಾಡಿದ್ದಾರೆ ಎಂದು ಗಂಗಾಧರ್ ಆರೋಪಿಸಿದ್ದಾರೆ. ಘಟನೆ ಕುರಿತು ಜ.೪ರಂದು ಗಂಗಾಧರ್ ಅವರು ಪುತ್ತೂರು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಇದೀಗ ಘಟನೆ ಬೆಳಕಿಗೆ ಬಂದಿದೆ.

ದಲಿತ ಸಂಘಟನೆ ಮೂಲಕ ಪ್ರಕರಣ ಬೆಳಕಿಗೆ:
ದಲಿತ ಸಂಘಟನೆಗಳು ಎ.ಎಸ್.ಐ ಗಂಗಾಧರ್ ಅವರಿಗೆ ಹಲ್ಲೆ ಮತ್ತು ಜಾತಿ ನಿಂಧನೆ ಮಾಡಿದ ಪ್ರಕರಣಕ್ಕೆ ವಾರ ಕಳೆದು ಇನ್ನೂ ಆರೋಪಿಗಳ ವಿಚಾರಣೆಯನ್ನು ಪೊಲೀಸರು ಮಾಡಿಲ್ಲ ಎಂದು ಆರೋಪಿಸಿ ಪತ್ರಿಕಾಗೋಷ್ಠಿ ನಡೆಸಿದ ವೇಳೆ ವಿಚಾರ ಬೆಳಕಿಗೆ ಬಂದಿದೆ. ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಇನ್ನಿತರ ಅನ್ಯಾಯಗಳ ಬಗ್ಗೆ ಪುತ್ತೂರಿನ ಯಾವುದೇ ಪೊಲೀಸ್ ಠಾಣೆಯಲ್ಲಿ ನ್ಯಾಯ ಸಿಗುತ್ತಿಲ್ಲ. ನ್ಯಾಯಕ್ಕಾಗಿ ಪ್ರತಿಭಟನೆ ಮಾಡುವ ಸ್ಥಿತಿಯನ್ನು ಪೊಲೀಸರೇ ನಿರ್ಮಿಸುತ್ತಿದ್ದಾರೆ ಎಂದು ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿ ಸ್ಥಾಪಕ ಅಧ್ಯಕ್ಷ ಶೇಸಪ್ಪ ಬೆದ್ರಕಾಡು ತಿಳಿಸಿದ್ದಾರೆ.

ಸುಳ್ಯ ಠಾಣೆಯ ಎಎಸ್‌ಐ ಗಂಗಾಧರ್ ದಲಿತ ಸಮುದಾಯದವರಾಗಿದ್ದು, ಪ್ರಸಾದ್ ಮತ್ತು ಪವನ್ ಎಂಬವರು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿರುವ ಬಗ್ಗೆ ದೂರು ನೀಡಿ ೧೦ ದಿನಗಳು ಕಳೆದರೂ ಆರೋಪಿಗಳನ್ನು ವಿಚಾರಣೆ ನಡೆಸಿಲ್ಲ. ನಮ್ಮ ಸಮುದಾಯದವರಿಗೆ ಅನ್ಯಾಯವಾದಾಗ ಪ್ರತಿಭಟನೆ ಮಾಡಿದರೆ ಮಾತ್ರ ಕಾನೂನು ಕ್ರಮ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಗಮನ ಹರಿಸಿ ದಲಿತರ ಮೇಲೆ ನಡೆಯುವ ದೌರ್ಜನ್ಯಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಎಂದು ಅವರು ಹೇಳಿದ್ದಾರೆ.

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿ ಅಧ್ಯಕ್ಷ ಚಂದ್ರಶೇಖರ ವಿಟ್ಲ, ಪುತ್ತೂರು ತಾಲೂಕು ಶಾಖೆಯ ಅಧ್ಯಕ್ಷ ಬಿ ಕೆ ಅಣ್ಣಪ್ಪ ಕಾರೆಕ್ಕಾಡು, ಉಪಾಧ್ಯಕ್ಷ ಮನೋಹರ ಕೋಡಿಜಾಲು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!