March 23, 2026

ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಫಲಾನುಭವಿಗಳಿಗೆ ಚೆಕ್ ವಿತರಣೆ:
ಪುತ್ತೂರು ಶಾಸಕ ಸಂಜೀವ ಮಠಂದೂರು ಅವರಿಂದ ಹಸ್ತಾಂತರ

0
IMG-20220113-WA0004.jpg

ವಿಟ್ಲ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಫಲಾನುಭವಿಗಳಿಗೆ ವಿವಿಧ ಯೋಜನೆಗಳಿಂದ ಮಂಜೂರಾದ ಪರಿಹಾರಧನ ಚೆಕ್ ಗಳ ವಿತರಣಾ ಸಮಾರಂಭ ವಿಟ್ಲದ ಅತಿಥಿಗೃಹದಲ್ಲಿ ನಡೆಯಿತು.‌

ಸಂಜೀವ ಮಠಂದೂರ ಮಾತನಾಡಿ ನಮ್ಮ ಆರೋಗ್ಯದ ಬಗ್ಗೆ ನಾವೆಲ್ಲರೂ ಗಮನ ಕೊಡಬೇಕು. ಮೊನ್ನೆ ನಡದ  ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ  ಬಿಜೆಪಿ ಪಕ್ಷದ ಸದಸ್ಯ ರನ್ನು ಗೆಲ್ಲುಸಿಕೊಟ್ಟಿದ್ದೀರಿ. ನಮ್ಮ ಸಮಾಜದ ದುರ್ಭಲ ವರ್ಗದವರನ್ನು ಆರ್ಥಿಕ ಸ್ವಾವಲಂಬನೆ ಕೊಡಬೇಕು ಎನ್ನುವ ದೃಷ್ಟಿಯಿಂದ ಚೆಕ್ ವಿತರಣೆ ಮಾಡುಲಾಗುತ್ತಿದೆ.  ಪಟ್ಟಣ ಪಂಚಾಯತ್ ಗಳಿಗೆ ೫ ಕೋಟಿ ಅನುಧಾನ ಹಂಚಿಕೆ ಮಾಡಲಾಗಿದೆ. ಪ್ರಕೃತಿಯಲ್ಲಿ ಪರಿವರ್ತನೆಯಾದಾಗ ನಮ್ಮಲ್ಲಿಯೂ ಬದಲಾವಣೆ ಆಗಬೇಕು ಎಂದರು.

ವಿಟ್ಲ ಪಟ್ಟಣ ಪಂಚಾಯಿತಿ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಮನೆ ರಿಪೇರಿ ಮತ್ತು ನಿರ್ಮಾಣಕ್ಕೆ ಧನಸಹಾಯ ಚೆಕ್, ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಅಂಗವಿಕಲರಿಗೆ ಸೇರಿದಂತೆ ಒಟ್ಟು 23 ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು.‌ ಕಂದಾಯ ಇಲಾಖೆ ವತಿಯಿಂದ ನೆರೆ ಪರಿಹಾರ ಯೋಜನೆಯಲ್ಲಿ ಬಿಡುಗಡೆಯಾದ 5 ಲಕ್ಷ. ರೂ ಮೊತ್ತದ ಚೆಕ್ ವಿತರಿಸಲಾಯಿತು.‌

ಈ ಸಂದರ್ಭ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜಾ ರಾಧಾಕೃಷ್ ಆಳ್ವ, ವಿಟ್ಲ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಅರುಣ್ ಎಂ ವಿಟ್ಲ, ವಿಟ್ಲ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಾಲಿನಿ, ಕಂದಾಯ ನಿರೀಕ್ಷಕ ಮಂಜುನಾಥ ಕೆ.ಎಚ್, ಗ್ರಾಮ ಕರಣಿಕ ಪ್ರಕಾಶ್ ಪಿ, ಪಟ್ಟಣ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!