February 3, 2026

ನೆಲ್ಯಾಡಿ: ಎಲ್‌ಐಸಿ ಪ್ರತಿನಿಧಿಯ ಬರ್ಬರ ಹತ್ಯೆ

0
IMG-20220113-WA0008.jpg

ನೆಲ್ಯಾಡಿ: ಎಲ್‌ಐಸಿ ಪ್ರತಿನಿಧಿಯಾಗಿದ್ದ ಕೃಷಿಕರೋರ್ವರನ್ನು ಕೊಲೆಗೈದಿರುವ ಘಟನೆ ಕಡಬ ತಾಲೂಕಿನ ಉದನೆ ಸಮೀಪದ ರೆಖ್ಯ ನೇಲ್ಯಡ್ಕದ ದೇವಸ್ಯದಲ್ಲಿ ಜ.13 ರಂದು ಬೆಳಿಗ್ಗೆ 10 ಗಂಟೆಗೆ ನಡೆದಿದೆ.

ದೇವಸ್ಯ ನಿವಾಸಿ ಶಾಂತಪ್ಪ ಗೌಡ (40) ಕೊಲೆಯಾದ ವ್ಯಕ್ತಿ. ಜಮೀನು ಕುರಿತಾದ ವ್ಯಾಜ್ಯಕ್ಕೆ ಸಂಬಂಧಿಸಿ ಈ ಕೊಲೆ ಕೃತ್ಯ ನಡೆದಿದೆ ಎಂದು ಮಾಹಿತಿ ಲಭ್ಯವಾಗಿದೆ.

ಘಟನಾ ಸ್ಥಳಕ್ಕೆ ಧರ್ಮಸ್ಥಳ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!