March 23, 2026

ನಗ್ನ ಚಿತ್ರಗಳನ್ನು ಕಳುಹಿಸಿದರೆ ಮಾತ್ರ ಮಾಡಲಿಂಗ್ ನಲ್ಲಿ ಅವಕಾಶ ನೀಡುವುದಾಗಿ ಬೆದರಿಕೆ: ಆರೋಪಿಯ‌ ಬಂಧನ

0
image_editor_output_image1373003962-1642061494984.jpg

ಬೆಂಗಳೂರು: ನಗ್ನ ಚಿತ್ರಗಳನ್ನು ರವಾನೆ ಮಾಡಿದರೆ ಮಾಡಲಿಂಗ್ ನಲ್ಲಿ ಅವಕಾಶ ನೀಡುವುದಾಗಿ ಹೇಳಿ ಬಳಿಕ ಅದೇ ಫೋಟಗಳಿಂದ ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಯುವತಿಯ ಸೋಗಿನಲ್ಲಿ ನಕಲಿ ಖಾತೆ ತೆರೆದು, ಮಾಡೆಲ್ ಮಾಡಿಸುವುದಾಗಿ ಯುವತಿಯರ ಅರೆಬೆತ್ತಲೆ ಪೋಟೊ, ವಿಡಿಯೋ ಪಡೆದು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ‌

ಬಂಧಿತನನ್ನು ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ ಆರೋಪಿ ಪ್ರಪಂಚ್ ನಾಚಪ್ಪ ಎಂದು ಗುರುತಿಸಲಾಗಿದ್ದು, ಈತ ಕೊಡಗು ಮೂಲದ ನಿವಾಸಿಯಾದ ಈತ ಬೆಂಗಳೂರಿನ ಬಾಣಸವಾಡಿ ಕಾಲೇಜಿನಲ್ಲಿ ಬಿಸಿಎ ಪದವಿ ಮಾಡಿಕೊಂಡಿದ್ದ. ಆತನ ಮೊಬೈಲ್ ಪರಿಶೀಲಿಸಿದ ಪೊಲೀಸರೇ ದಂಗಾಗಿದ್ದಾರೆ. ಆರೋಪಿಯು ತನ್ನ ವಿಕೃತ ಸುಖಕ್ಕಾಗಿ ಯುವತಿಯರ ಖಾಸಗಿ ಫೋಟೊ ಹಾಗೂ ವಿಡಿಯೋ ತರಿಸಿಕೊಳ್ಳುತ್ತಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ.

Leave a Reply

Your email address will not be published. Required fields are marked *

error: Content is protected !!