T-20 ವಿಶ್ವಕಪ್:
ಭಾರತದ ವಿರುದ್ಧ ಪಾಕಿಸ್ತಾನಕ್ಕೆ 10 ವಿಕೆಟ್ ಗಳ ಜಯ
ದುಬೈ: T-20 ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ 10 ವಿಕೆಟ್ ಗಳ ಜಯ ಸಾದಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡವು ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 151 ಗಳಿಸಿತು. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಆಕರ್ಷಕ ಅರ್ಧ ಶತಕ ಸಿಡಿಸಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರೆ ಉಳಿದ ಆಟಗಾರರಿಂದ ನಿರೀಕ್ಷಿಸಿದಷ್ಟು ರನ್ ಪೇರಿಸುವಲ್ಲಿ ಎಡವಿದರು.
ಕೆ ಎಲ್ ರಾಹುಲ್ 3(8), ರೋಹಿತ್ ಶರ್ಮಾ0(1), ವಿರಾಟ್ ಕೊಹ್ಲಿ 57(49), ಸೂರ್ಯ ಕುಮಾರ್ ಯಾದವ್ 11(8), ರಿಷಭ್ ಪಂತ್ 39(30), ರವೀಂದ್ರ ಜಡೇಜ 13(13), ಹಾರ್ದಿಕ್ ಪಾಂಡ್ಯ 11(8), ಭುವನೇಶ್ ಕುಮಾರ್ 5*(4) ಮೊಹಮ್ಮದ್ ಶಮಿ 0*(0) ರನ್ ಗಳಿಸಿದರು.
ಭಾರತ ನೀಡಿದ 152 ರನ್ನಿನ ಗುರಿಯನ್ನು ಪಾಕಿಸ್ತಾನ ತಂಡವು 17.5 ಓವರ ಗಳಲ್ಲಿ 152 ರನ್ ಗಳಿಸಿ 10 ವಿಕೆಟ್ ಗಳ ಜಯ ಸಾಧಿಸಿತು. ಪಾಕಿಸ್ತಾನ ತಂಡದ ಆರಂಭಿಕ ಆಟಗಾರರಾದ ಬಾಬರ್ ಅಝಂ ಮತ್ತು ಮೊಹಮ್ಮದ್ ರಿಝ್ವಾನ್ ಮೊದಲ ವಿಕೆಟ್ ಗೆ 152 ರನ್ ಗಳಿಸಿ ತಂಡದ ಗೆಲುವಿಗೆ ಆಸರೆಯಾದರು. ಬಾಬರ್ ಅಝಂ 68*(52), ಮೊಹಮ್ಮದ್ ರಿಝ್ವಾನ್ 79*(55) ಆಕರ್ಷಕ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ಪಾಕಿಸ್ತಾನ ತಂಡದ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಶಾಹಿನ್ ಅಫ್ರಿದಿ 3, ಹಸನ್ ಅಲಿ 2, ಶಾದಾಬ್ ಖಾನ್ ಮತ್ತು ಹಾರಿಸ್ ರೌಫ್ ತಲಾ 1 ವಿಕೆಟ್ ಪಡೆದರು.