December 16, 2025

ಬೆಂಗಳೂರಿನ ಖಾಸಗಿ ಕಂಪೆನಿ ವತಿಯಿಂದ ಸವಣಾಲು ಅನುದಾನಿತ ಶಾಲೆಗೆ ಕೊಠಡಿ, ಪೀಠೋಪಕರಣ ಕೊಡುಗೆ

0
IMG-20220108-WA0041.jpg

ಬೆಳ್ತಂಗಡಿ: ತ್ರಿಪಥ್ ಲಾಜಿಸ್ಟಿಕ್ಸ್ ಬೆಂಗಳೂರು ಇವರು ಸವಣಾಲು ಅನುದಾನಿತ ಪ್ರಾಥಮಿಕ ಶಾಲೆಗೆ ಕೊಡಮಾಡಿದ ಶಾಲಾ ನೂತನ ಕಟ್ಟಡದ ಉದ್ಘಾಟನೆ, ಪೀಠೋಪಕರಣ ಹಸ್ತಾಂತರ, ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಹೆತ್ತವರಿಗೆ ಕೊಡುಗೆ ಹಸ್ತಾಂತರ, ಹಾಗೂ ಹಳೆ ವಿದ್ಯಾರ್ಥಿಯಾಗಿರುವ ವಿಜ್ಞಾನಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಲಕ್ಷ್ಮೀನಾರಾಯಣ ಎಜ್ಯುಕೇಶನಲ್ ಸೊಸೈಟಿ ಅಧ್ಯಕ್ಷ ಲ.‌ರಘುರಾಮ ಗಾಂಭೀರ ವಹಿಸಿದ್ದರು.
ಉದ್ಘಾಟನೆಯನ್ನು ಕಂಪೆನಿಯ ಅಧ್ಯಕ್ಷ ಬದರಿನಾಥ ಜಿ ಗುಬ್ಬಿ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ನೋಟರಿ ನ್ಯಾಯವಾದಿ ಮುರಳಿ ಬಿ, ಸುರತ್ಕಲ್ ಎನ್ ಐ ಟಿ‌ ಕೆ ಪ್ರಾಧ್ಯಾಪಕ ಡಾ. ದೇಂತಾಜೆ ಕೃಷ್ಣ ಭಟ್ ಭಾಗಿಯಾಗಿದ್ದರು. ‌ಸಮಾರಂಭದಲ್ಲಿ ತ್ರಿಪಥ್ ಲಾಜಿಸ್ಟಿಕ್ಸ್ ಇದರ ಕಾರ್ಪೋರೇಟರ್ ಪ್ಲೇನಿಂಗ್ ವಿಭಾಗದ ನಿರ್ದೇಶಕ ಅಬ್ಬಾಸ್ ಖಾನ್, ಮಾರ್ಕೆಟಿಂಗ್ ವಿಭಾಗದ ನಿರ್ದೇಶಕ ಪ್ರಭಂಜನ್ ಶ್ರೀಧರ್, ಹಣಕಾಸು ವಿಭಾಗದ ನಿರ್ದೇಶಕರಾದ ಶ್ರೀಕರ ತಂತ್ರಿ ಮತ್ತು ರಮೇಶ್, ನಿರ್ದೇಶಕರಾದ ರವೀಂದ್ರ ಕುಮಾರ್, ರಾಮಚಂದ್ರ ಕುಲಾಲ್, ಮೈಕಲ್ ಅರೋಕ್ಯನಾಥನ್, ನಿವೃತ್ತ ಶಿಕ್ಷಕ ಏಮಣ್ಣ ಇವರು ಉಪಸ್ಥಿತರಿದ್ದರು.

ಗ್ರಾ.ಪಂ ಸದಸ್ಯರಾದ ಪ್ರಭಾಕರ ಆಚಾರ್ಯ,ಸುಮಲತಾ ಬಾರಡ್ಕ, ಚಂದ್ರಶೇಖರ್ ಮತ್ತು ಲೋಕನಾಥ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ದಯಾನಂದ ರೈ, ಎಸ್‌ಡಿಎಂಸಿ ಅಧ್ಯಕ್ಷ ಕೇಶವ ನಾಯ್ಕ, ಶಾಲಾ ವಿದ್ಯಾರ್ಥಿ ನಾಯಕಿ ರಕ್ಷಿತಾ ಹಾಜರಿದ್ದರು.

ಸಿಆರ್‌ಪಿ ರಾಜೇಶ್ ಮತ್ತು ಕುಶಾಲಪ್ಪ ಗೌಡ ಕಾರ್ಯಕ್ರಮ ನಿರೂಪಿಸಿದರು. ಎಸ್.ಜಿ ಸುಬ್ರಹ್ಮಣ್ಯ ಭಟ್ ಸ್ವಾಗತಿಸಿದರು. ಶಿಕ್ಷಕ ಕೂಸಪ್ಪ ಧನ್ಯವಾದವಿತ್ತರು. ಶಾಲಾ ಮುಖ್ಯ ಶಿಕ್ಷಕ ಮಂಜುನಾಥ ಪ್ರಸ್ತಾವಿಕವಾಗಿ ಮಾತನಾಡಿ ಕೊಡುಗೆಗೆ ಅಭಿನಂದನೆ ಸಲ್ಲಿಸಿದರು.

ಗಣೇಶ್ ಭಂಡಾರಿ, ವಿವೇಕ್ ಶೆಟ್ಟಿ ಮತ್ತು ಮಮತಾ ಎನ್ ಸನ್ಮಾನಿತರನ್ನು ಪರಿಚಯಿಸಿದರು. ಸಹ ಶಿಕ್ಷಕಿಯರಾದ ಮಹಾಲಕ್ಷ್ಮೀ, ನಿಶ್ಮಿತಾ, ಶುಭಾ, ಸೌಮ್ಯಾ ಇವರು ಸಹಕರಿಸಿದರು.

ಸವಣಾಲು ಶಾಲೆಯಲ್ಲಿ ಕಲಿತ ಸ್ಥಳೀಯ ನಿವಾಸಿನಿ ಜಮೀಲಾ ಅವರ ಪತಿ ಅಬ್ಬಾಸ್ ಖಾನ್ ಅವರು ತ್ರಿಪಥ ಲಾಜಿಸ್ಟಿಕ್ಸ್ ಬೆಂಗಳೂರು ಸಂಸ್ಥೆಯ ಕಾರ್ಪೋರೆಟ್ ಪ್ಲಾನಿಂಗ್ ನಿರ್ದೇಶಕರಾಗಿದ್ದು, ಅವರ ಮುಖಾಂತರ ಈ ಕೊಡುಗೆ ಇಲ್ಲಿಗೆ ಸಮರ್ಪಣೆ ಆಗಿದೆ ಎಂದು ಮುಖ್ಯೋಪಾಧ್ಯಾಯ ಮಂಜುನಾಥ ಪ್ರಸ್ತಾವನೆಗೈದರು.
ಇತ್ತೀಚಿಗೆ ಅಗಲಿದ ಊರ ಹಿರಿಯ ಕೇಶವ ಭಟ್ ಮಲ್ಲರೋಡಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶಾಲೆಗೆ ದೇಣಿಗೆ ನೀಡಿದವರನ್ನು ಗುರುತಿಸಲಾಯಿತು.

Leave a Reply

Your email address will not be published. Required fields are marked *

error: Content is protected !!