ಸಾಲೆತ್ತೂರು ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ಮಾಡಿದ ಬೆನ್ನಲ್ಲೆ ಇನ್ನೊಂದು ವೀಡಿಯೋ ವೈರಲ್ ಕೈಯಲ್ಲಿ ಬಿಯರ್ ಬಾಟಲಿ ಹಿಡಿದು ಮೈ ಮೇಲೆ ದೈವ ಆವೇಶ ರೀತಿಯಲ್ಲಿ ವರ್ತನೆ
ಬಂಟ್ವಾಳ: ಸಾಲೆತ್ತೂರು ಎಂಬಲ್ಲಿ ಮುಸ್ಲಿಂ ಸಮುದಾಯದ ಮದುವೆ ಸಮಾರಂಭದ ಮೊದಲ ರಾತ್ರಿ ದಿನ ಮದುಮಗನ ಕಡೆಯವರು ಕೊರಗಜ್ಜನಿಗೆ ಅಪಮಾನ ಮಾಡಿದ ಪ್ರಕರಣ ನಡೆದ ಬೆನ್ನಲ್ಲೇ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಇನ್ನೊಂದು ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ವ್ಯಕ್ತಿಯೋರ್ವ ಕೈಯಲ್ಲಿ ಬಿಯರ್ ಬಾಟಲಿ ಹಿಡಿದುಕೊಂಡು ಮೈ ಮೇಲೆ ದೈವ ಆವೇಶವಾದ ರೀತಿಯಲ್ಲಿ ವರ್ತಿಸುತ್ತಿರುವಂತಹ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಒಂದು ಪ್ರಕರಣ ಮುಗಿಯುವ ಮೊದಲೇ ಇನ್ನೊಂದು ಪ್ರಕರಣ ಸದ್ದು ಮಾಡಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಈ ವೀಡಿಯೋ ಇಂದು ಬೆಳಿಗ್ಗೆನಿಂದ ಹರಿದಾಡುತ್ತಿದ್ದು, ಹಳೆಯ ವೀಡಿಯೋ ಅಥವಾ ಇತ್ತೀಚಿನ ವೀಡಿಯೋ ಎಂಬುದರ ಬಗ್ಗೆ ದೃಢಪಟ್ಟಿಲ್ಲ. ಒಟ್ಟಿನಲ್ಲಿ ಈ ವೀಡಿಯೋ ಭಾರಿ ಸಂಚಲನ ಮೂಡಿಸಿದ್ದು, ಆಕ್ರೋಶ ವ್ಯಕ್ತವಾಗಿದೆ.
ದಿನದಿಂದ ದಿನಕ್ಕೆ ಧಾರ್ಮಿಕ ಭಾವನೆಗೆ ಧಕ್ಕೆಯಾಗುವಂತಹ ಪ್ರಕರಣ ಹೆಚ್ಚಾಗುತ್ತಿದ್ದು, ಈ ಕೃತ್ಯವೆಸಗಿದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಸಾರ್ವಜನಿಕ ವಲಯದಲ್ಲಿ ಆಗ್ರಹಿಸುತ್ತಿದ್ದಾರೆ.





