March 23, 2026

ಸುಳ್ಯ ಗೋಡೆ ಕುಸಿದು ಮೃತರಾದ ಮಹಿಳೆಯರ ಕುಟುಂಬಕ್ಕೆ ಸುಳ್ಯ ಅಲ್ಪಸಂಖ್ಯಾತರ ಸೊಸೈಟಿ ವತಿಯಿಂದ ಸಹಾಯಧನ ವಿತರಣೆ

0
IMG-20220108-WA0024.jpg

ಸುಳ್ಯ: ಎಣ್ಣೂರು ಗ್ರಾಮದ ನರ್ಲಡ್ಕ ಎಂಬಲ್ಲಿ ಡಿಸೆಂಬರ್ 19ರಂದು ಶೌಚಾಲಯದ ಗೋಡೆ ಕುಸಿದು ಮೃತರಾದ ಅಮೀನ ಹಾಗೂ ನಬೀಸ ರವರ ಮನೆಗೆ ಇಂದು ಸುಳ್ಯ ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರು ಮತ್ತು ನಿರ್ದೇಶಕರ ತಂಡ ಇಂದು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಸಂಘದ ಸಹಾಯನಿಧಿ ವತಿಯಿಂದ ಮೃತರಾದ ಎರಡು ಮಹಿಳೆಯರ ಕುಟುಂಬಸ್ಥರಿಗೆ ಸಂಘದ ಅಧ್ಯಕ್ಷ ಇಕ್ಬಾಲ್ ಎಲಿಮಲೆ ರವರು ತಲಾ 10 ಸಾವಿರ ರೂಪಾಯಿಗಳ ಚೆಕ್ ಹಸ್ತಾಂತರಿಸಿ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷೆ ಹಾಜಿರ ಅಬ್ದುಲ್ ಗಫೂರ್, ಅಲ್ಪಸಂಖ್ಯಾತರ ಸೊಸೈಟಿ ನಿರ್ದೇಶಕರಾದ ಇಸ್ಮಾಯಿಲ್ ಪಡ್ಪಿನಂಗಡಿ, ಎ ಕೆ ಹಸೈನಾರ್ ಕಲ್ಲುಗುಂಡಿ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಕಡಬ ತಾಲೂಕು ಸಮಿತಿ ಅಧ್ಯಕ್ಷ ಜಲೀಲ್ ಬೈತಡ್ಕ, ಬೈತಡ್ಕ ಮಸೀದಿ ಸಮಿತಿ ಉಪಾಧ್ಯಕ್ಷ ಇಕ್ಬಾಲ್ ಬೈತಡ್ಕ, ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
ಪತ್ರಕರ್ತ ಹಸೈನಾರ್ ಜಯನಗರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!