February 3, 2026

ವಿಟ್ಲ: ವಿಜೇತ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ

0
IMG-20220102-WA0014.jpg

ವಿಟ್ಲ: ಕಾಂಗ್ರೆಸ್ ಕಾರ್ಯಕರ್ತರು ಅಪವಾದ, ಟೀಕೆ ಟಿಪ್ಪಣಿಗಳನ್ನು ಎದುರಿಸಿ, ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದಾರೆ. ಕಾಂಗ್ರೆಸ್ ಗೆ ಸೋಲು ಅಲ್ಲ, ಹಿನ್ನಡೆಯಾಗಿದೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಬಲಿಷ್ಠಗೊಳಿಸಬೇಕು ಎಂದು ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್ ಕೆ.ವಿ ಹೇಳಿದರು.

ವಿಟ್ಲ ನಗರ ಕಾಂಗ್ರೆಸ್ ವತಿಯಿಂದ ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ವಿಜೇತರಾದ ಅಭ್ಯರ್ಥಿಗಳಿಗೆ ಮತ್ತು ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತೀಯ ಸಂಸ್ಕೃತಿಯಲ್ಲಿ ಬದುಕುವಂತೆ ಕಾಂಗ್ರೆಸ್ ಮಾಡಿದೆ. ಎಲ್ಲಾ ಸಮುದಾಯವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ.ನಮಗೆ ಶಕ್ತಿ ತುಂಬಿದೆ ಎಂದರು.

ಕೆಪಿಸಿಸಿ ಕಾರ್ಯದರ್ಶಿ ಎಂ ಎಸ್ ಮಹಮ್ಮದ್ ಮಾತನಾಡಿ ಬಿಜೆಪಿ ಜಾತಿ ಮತ್ತು ಹಣದ ಹೊಳೆ ಸುರಿಸಿ ಅಧಿಕಾರ ಹಿಡಿದಿದೆ. ಅದು ಪ್ರಮಾಣಿಕ ಕೆಲಸದಲ್ಲಿ ಈ ಬಾರಿ ಪಟ್ಟಣ ಪಂಚಾಯತ್ ನಲ್ಲಿ ಗೆಲ್ಲಲಿಲ್ಲ. ಅಭಿವೃದ್ಧಿ ಮಾಡದೇ ಅಪ್ರಚಾರದ ಮೂಲಕ ಅಧಿಕಾರ ಹಿಡಿದಿದೆ. ಕೋಮುವಾದಿ ಪಕ್ಷಗಳಿಗೆ ಚುನಾವಣೆ ಗೆಲ್ಲಲು ಜಾತಿ ಒಂದೇ ಆಧಾರವಾಗಿದೆ. ಅದನ್ನು ಚುನಾವಣೆಗೆ ಬಳಿಸಿಕೊಳ್ಳುತ್ತಿದೆ ಎಂದರು.

ಗೆಲುವು ಸಾಧಿಸಿದ ಅಭ್ಯರ್ಥಿಗಳಾದ ವಿಕೆಎಂ ಅಶ್ರಫ್, ಹಸೈನಾರ್ ನೆಲ್ಲಿಗುಡ್ಡೆ, ಡೀಕಯ್ಯ, ಪದ್ಮಿನಿ, ಲತಾವೇಣಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕರ್ತರಾದ ಎಸ್ ಕೆ ಮೊಹಮ್ಮದ್, ಪುತ್ತೂರು ನಗರ ಸಭಾ ಸದಸ್ಯ ರಿಯಾಝ್ ಪುತ್ತೂರು, ರಂಜೀತ್ ಬಂಗೇರ, ಪೂವಪ್ಪ, ರೋಶನ್ ರೈ, ಗಣೇಶ್ ಶೆಟ್ಟಿ ಚಂದಳಿಕೆ ಅವರನ್ನು ಗೌರವಿಸಲಾಯಿತು.

ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರಹಿಮಾನ್, ಮಾಜಿ ಅಧ್ಯಕ್ಷ ಪ್ರವೀಣ್ ಚಂದ್ರ ಆಳ್ವ, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದಾಲಿ, ಪ್ರಮುಖರಾದ ತುಕ್ರಪ್ಪಗೌಡ, ರಾಮಣ್ಣ ಪಿಲಿಂಜ ಉಪಸ್ಥಿತರಿದ್ದರು.

ಮಹಮ್ಮದ್ ಇಕ್ಬಾಲ್ ಹಾನೆಸ್ಟ್ ನಿರೂಪಿಸಿದರು. ವಿಕೆಎಂ ಅಶ್ರಫ್ ಸ್ವಾಗತಿಸಿದರು.

Leave a Reply

Your email address will not be published. Required fields are marked *

error: Content is protected !!