February 3, 2026

ವಿಟ್ಲ: ಜೇಸಿಐ ನೂತನ ಪದಾಧಿಕಾರಿಗಳ ಪದಗ್ರಹಣ

0
IMG-20220102-WA0012.jpg

ವಿಟ್ಲ: ಜೇಸಿಐ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜೇಸಿಐ ಇಂಡಿಯಾದ ಪೂರ್ವ ಉಪಾಧ್ಯಕ್ಷ ಸಂದೀಪ್ ಕುಮಾರ್ ಅವರು ಮಾತನಾಡಿ ಗುರಿ ಇಟ್ಟುಕೊಂಡು ಮಾಡವ ಕಾರ್ಯ ಯಶಸ್ಸಿಯಾಗತ್ತದೆ. ಜೆಸಿಐ ವಿಟ್ಲ ಘಟಕದಲ್ಲಿ ನಿರಂತರ ಕಾರ್ಯಕ್ರಮಗಳು ನಡೆದಿದೆ. ಎಲ್ಲರ ಜತೆಗೆ ಬೆರೆತು ಕಾರ್ಯ ಮಾಡಿದಾಗ ಅದು ಯಶಸ್ವಿಯಾಗುತ್ತದೆ ಎಂದರು.

ವಿಟ್ಲ ಜೇಸಿಐ ನೂತನ ಅಧ್ಯಕ್ಷ ಚಂದ್ರಹಾಸ ಕೊಪ್ಪಳ ಮಾತನಾಡಿ ವಿಟ್ಲ ಜೇಸಿಐ ನಿರಂತರ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಮುಂದಿನ ದಿನಗಳಲ್ಲಿ ವಿಟ್ಲ ಜೇಸಿಐ ಮೂಲಕ ಇನ್ನಷ್ಟು ಸೇವೆ ನೀಡುವ ಉದ್ದೇಶವಿದೆ. ಎಲ್ಲರ ಸಹಕಾರದ ನಿರೀಕ್ಷೆಯಲ್ಲಿದ್ದೇನೆ ಎಂದು ಹೇಳಿದರು.

ವಿಟ್ಲ ಜೇಸಿಐ ನೂತನ ಅಧ್ಯಕ್ಷ ಚಂದ್ರಹಾಸ ಕೊಪ್ಪಳ ಮತ್ತು ಕಾರ್ಯದರ್ಶಿ ನವೀನ ಚಂದ್ರ ವಿ.ಆರ್ ಅವರು ಅಧಿಕಾರ ವಹಿಸಿಕೊಂಡರು. ಮೇಘಾ, ಅಶ್ವಿನಿ ದಿನೇಶ್ ಶೆಟ್ಟಿ, ಚರಣ್ ಕುಮಾರ್ ಅವರು ನೂತನವಾಗಿ ಜೇಸಿಐ ಸಂಸ್ಥೆಗೆ ಸೇರ್ಪಡೆಗೊಂಡರು.

ವಲಯಾಧ್ಯಕ್ಷ ರೋಯನ್ ಉದಯ ಕ್ರಾಸ್ತಾ, ಜೇಸಿ ವಲಯ ೧೫ರ ಉಪಾಧ್ಯಕ್ಷ ಪ್ರಶಾಂತ್ ಲಾಯಿಲ, ಜೇಸಿರೇಟ್ ನೂತನ ಅಧ್ಯಕ್ಷೆ ಸೌಮ್ಯ ಚಂದ್ರಹಾಸ, ಖುಷಿ ರೈ, ನಿರ್ಗಮನ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ನಿರ್ಗಮನ ಕಾರ್ಯದರ್ಶಿ ಪರಮೇಶ್ವರ ಹೆಗ್ಡೆ, ನಿರ್ಗಮನ ಪೂರ್ವಾಧ್ಯಕ್ಷ ದಿನೇಶ್ ಶೆಟ್ಟಿ, ತಕ್ಷಿತ್ ಬಿ.ಕೆ,
ಜೇಸಿರೇಟ್ ನಿರ್ಗಮನ ಅಧ್ಯಕ್ಷೆ ಶರೀಕಾ ಚಂದ್ರಹಾಸ ಶೆಟ್ಟಿ ಉಪಸ್ಥಿತರಿದ್ದರು.
ಕವಿತಾ ಪರಮೇಶ್ವರ ಹೆಗ್ಡೆ, ಸುಮಂತ್, ಸಂದೀಪ್, ಕ್ಲಫರ್ಡ್ ವೇಗಸ್, ಹರ್ಷಿತ್ ಕುಮಾರ್, ಹೇಮಲತಾ, ವಿವಿಧ ಜವಾಬ್ದಾರಿ ನಿಭಾಯಿಸಿದರು.

Leave a Reply

Your email address will not be published. Required fields are marked *

error: Content is protected !!