October 1, 2026

ಅಕ್ಟೋಬರ್ 03, ಬಿ.ಸಿ.ರೋಡ್ ನಲ್ಲಿ ಬ್ಯಾರಿ ಭಾಷಾ ದಿನಾಚರಣೆ

0
image_editor_output_image234945596-1790856958279

ಬಂಟ್ವಾಳ : ಬ್ಯಾರಿ ಸಾಹಿತ್ಯ ಪರಿಷತ್ ಬಂಟ್ವಾಳ ಇದರ ಆಶ್ರಯದಲ್ಲಿ ಬ್ಯಾರಿ ಭಾಷಾ ದಿನಾಚರಣೆಯು ಅ.03 ರಂದು ಬೆಳಗ್ಗೆ 10.30  ಬಿ.ಸಿ.ರೋಡು – ತಲಪಾಡಿಯ ಡೈಮಂಡ್ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ನಡೆಯಲಿದೆ.

  ಕಾರ್ಯಕ್ರಮವನ್ನು ಡೈಮಂಡ್ ಇಂಟರ್ನ್ಯಾಷನಲ್ ಸ್ಕೂಲ್ ನ ಸಂಚಾಲಕ ಅಲ್ತಾಫ್ ಅಹ್ಮದ್ ಉದ್ಘಾಟಿಸಲಿದ್ದು, ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಪರಿಷತ್ ಅಧ್ಯಕ್ಷ   ಬಿ.ಎಂ. ಅಬ್ಬಾಸ್ ಅಲಿ ಅಧ್ಯಕ್ಷತೆ ವಹಿಸುವರು.

ಪತ್ರಕರ್ತ ಸಂಶುದ್ದೀನ್ ಸಂಪ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದು,
ಉದ್ಯಮಿ ಎಫ್.ಎಂ. ಬಶೀರ್ ಫರಂಗಿಪೇಟೆ. ಗೋಳ್ತಮಜಲು ಹಜಾಜ್ ಸಮೂಹ ಸಂಸ್ಥೆಗಳ  ಪಾಲುದಾರ ಹಾಜಿ ಜಿ. ಅಹ್ಮದ್ ಮುಸ್ತಫಾ, ಲೊರೆಟ್ಟೊಪದವು ಇಝ್ಝತುನ್ನೂರು ಯತೀಂ ಖಾನಾ ಇದರ ಕೋಶಾಧಿಕಾರಿ
ಹಂಝ ಪರ್ಲಿಯ ಅತಿಥಿಗಳಾಗಿ ಭಾಗವಹಿಸುವರು.

 

ಬ್ಯಾರಿ ಸಾಹಿತ್ಯ ಪರಿಷತ್ ಬಂಟ್ವಾಳ ಇದರ ಸಂಚಾಲಕ ಪಿ.ಎ. ರಹೀಂ ಅವರ ಅಧ್ಯಕ್ಷತೆಯಲ್ಲಿ ಬ್ಯಾರಿ ಕವಿಗೋಷ್ಠಿ ನಡೆಯಲಿದ್ದು, ಬ್ಯಾರಿ ಕವಿಗಳಾದ ಎಂ.ಪಿ. ಬಶೀರ್ ಅಹ್ಮದ್ ಬಂಟ್ವಾಳ,
ಅಬೂಬಕ್ಕರ್ ಅಮ್ಮುಂಜೆ, ಶಂಶೀರ್ ಬುಡೋಳಿ, ಆಯಿಷಾ ಯು.ಕೆ., ಆಯಿಷಾ ಪೆರ್ನೆ, ಸತ್ತಾರ್ ಗೂಡಿನಬಳಿ, ಸಲೀಂ ಬೋಳಂಗಡಿ, ಹನೀಫ್ ನಂದರಬೆಟ್ಟು, ಸರ್ಫಾಝ್ ಆಲಾಡಿ, ಸಲೀಂ ಮಾಣಿ ಕವನ ವಾಚಿಸುವರು.

ಅಶ್ರಫ್ ಅಪೋಲೋ ಕಲ್ಲಡ್ಕ
ರಶೀದ್ ನಂದಾವರ ಹಾಗೂ
ಶರೀಫ್ ಪರ್ಲಿಯ ಇವರಿಂದ ಬ್ಯಾರಿ ಹಾಡುಗಾರಿಕೆ ಕಾರ್ಯಕ್ರಮ ನಡೆಯಲಿದೆ ಎಂದು ಪರಿಷತ್ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!