September 19, 2026

ಪುತ್ತೂರು: ಮನೆಯಂಗಳದಲ್ಲಿ ಬಿದ್ದಿದ್ದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ: ವಿದ್ಯುತ್ ಅವಘಡ ಶಂಕೆ

0

ಪುತ್ತೂರು: ಯುವಕನೋರ್ವ ಮನೆಯಂಗಳದಲ್ಲಿ ಬಿದ್ದಿದ್ದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕೆಮ್ಮಾಯಿ ಬಡಾವು ಎಂಬಲ್ಲಿ ನಡೆದಿದೆ. ಬಡಾವು ನಿವಾಸಿ ಮೆಡಿಕಲ್ ಒಂದರಲ್ಲಿ…

image_editor_output_image-946119667-1789732612570

ಪುತ್ತೂರು: ಯುವಕನೋರ್ವ ಮನೆಯಂಗಳದಲ್ಲಿ ಬಿದ್ದಿದ್ದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕೆಮ್ಮಾಯಿ ಬಡಾವು ಎಂಬಲ್ಲಿ ನಡೆದಿದೆ.

ಬಡಾವು ನಿವಾಸಿ ಮೆಡಿಕಲ್ ಒಂದರಲ್ಲಿ ಉದ್ಯೋಗಿಯಾಗಿದ್ದ ರಕ್ಷಿತ್ (29)ಮೃತಪಟ್ಟ ಯುವಕ.

ಮೇಲ್ನೋಟಕ್ಕೆ ವಾಹನ ವನ್ನು ತೊಳೆಯುತ್ತಿದ್ದ ಸಂದರ್ಭ ವಿದ್ಯುತ್ ಅವಗಡ ಸಂಭವಿಸಿರಬಹುದು ಎಂದು ಹೇಳಲಾಗುತ್ತಿದೆ.

ಮನೆಯವರು ಹೊರಗಡೆ ಹೋಗಿದ್ದರಿಂದ ವಿಷಯ ತುಸು ತಡವಾಗಿ ಬೆಳಕಿಗೆ ಬಂದಿದೆ. ರಕ್ಷಿತ್ ಬಿದ್ದಿರುವುದನ್ನು ಗಮನಿಸಿದ ನೆರೆಯವರು ಇತರರ ಸಹಾಯದಿಂದ ಆಸ್ಪತ್ರೆಗೆ ಸಾಗಿಸಿದರೂ ಅವರು ಅದಾಗಲೇ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.

ಸದ್ಯ ಮೃತದೇಹವನ್ನು ಸರಕಾರಿ ಆಸ್ಪತ್ರೆಯ ಶವಗಾರದಲ್ಲಿಸಲಾಗಿದ್ದು. ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಮೃತರು ತಂದೆ, ತಾಯಿ ಹಾಗೂ ಸಹೋದರಿಯನ್ನು ಆಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!