ವಿಟ್ಲ: ಬ್ರೇಕ್ ವೈಫಲ್ಯದಿಂದ ರಸ್ತೆ ಬದಿಯ ಚರಂಡಿಗೆ ಬಿದ್ದ ಆಟೋರಿಕ್ಷಾ
ವಿಟ್ಲ: ಪುಣಚ ಗ್ರಾಮದ ಕೊಚ್ಚಿ ಎಂಬಲ್ಲಿ ವಿದ್ಯುತ್ ಚಾಲಿತ ಆಟೋರಿಕ್ಷಾ ಬ್ರೇಕ್ ವೈಫಲ್ಯದಿಂದ ರಸ್ತೆ ಬದಿಯ ಚರಂಡಿಗೆ ಬಿದ್ದ ಘಟನೆ ಬುಧವಾರ ಸಂಭವಿಸಿದೆ. ಆಟೋ ಚಾಲಕ ಯೋಗೀಶ್ ಗಾಯಗೊಂಡಿದ್ದಾರೆ.

ಆಟೋ ಚಾಲಕ ಬಾಳೆಕುಮೇರಿ ಯೋಗೀಶ್ ಅವರು ಮನೆಯಿಂದ ತೆರಳುತ್ತಿದ್ದಾಗ ಪರಿಯಾಲ್ತಡ್ಲ ಸಮೀಪ ಕೊಚ್ಚಿಯಲ್ಲಿನ ಇಳಜಾರು ರಸ್ತೆಯಲ್ಲಿ ಬ್ರೇಕ್ ವೈಫಲ್ಯ ಉಂಟಾಗಿ ರಸ್ತೆಯಿಂದ ಚರಂಡಿಗೆ ಬಿದ್ದು ಪಲ್ಟಿಯಾಗಿದೆ. ಚಾಲಕ ಯೋಗೀಶ್ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜತೆಗಿದ್ದ ಅವರ ಪುತ್ರಿ ಚಿಕ್ಕ ಪುಟ್ಟ ಗಾಯಗೊಂಡಿದ್ದಾರೆ.





