September 16, 2026

ಅಳಿಕೆ ಶ್ರೀ ಸತ್ಯಸಾಯಿ ವಿದ್ಯಾಸಂಸ್ಥೆಯಲ್ಲಿ ವಿದ್ಯಾಗಣಪತಿ ಮಹೋತ್ಸವ: ಸತ್ಯಸಾಯಿ ಬಾಬಾರವರ ಪ್ರೀತಿ ಅದು ಸಾವಿರ ಅಮ್ಮಂದಿರದ್ದು :ಎಂ. ಪದ್ಮನಾಭ ಪೈ

0
IMG-20260916-WA0144

ವಿಟ್ಲ: ಅಳಿಕೆಯ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಗಳ ವತಿಯಿಂದ ಆಯೋಜಿಸಿರುವ ವಿದ್ಯಾಗಣಪತಿ ಮಹೋತ್ಸವದ ಮೂರನೇ ದಿನದ ಪೂರ್ವಾಹ್ನದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಮಂಗಳೂರಿನ ಹಿರಿಯ ಉದ್ಯಮಿಗಳಾದ ಕರ್ನಾಟಕ ರಾಜ್ಯದ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ (ಉ) ಅಧ್ಯಕ್ಷರಾದ ಎಂ. ಪದ್ಮನಾಭ ಪೈ ತಮ್ಮ ಭಾಷಣದಲ್ಲಿ ಸ್ವಾಮಿಯ ಮಹಿಮೆಯ ದಿವ್ಯಾನುಭವಗಳನ್ನು; ಬಾಬಾರವರು ಹೇಳಿದಂತೆ ವಿದ್ಯಾರ್ಥಿಗಳಲ್ಲಿರಬೇಕಾದ ಆರು ಪ್ರಮುಖ ಲಕ್ಷಣಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು. ಮಹಿಳಾ ಸಂಯೋಜಕಿಯಾದ ಪ್ರಿಯಾ ಪದ್ಮನಾಭ ಪೈ ಎಂ. ಮಕ್ಕಳನ್ನು ಉದ್ದೇಶಿಸಿ ಗಣಪತಿಯ ಮೂರ್ತಿಯ ಮಹತ್ವದ ಬಗ್ಗೆ ತಿಳಿಸಿದರು. ವಿದ್ಯಾರ್ಥಿನಿಯರಾದ ಪ್ರತೀಕಾ ಹಾಗು ಅಭಿರಾಮಿ ವಿಘ್ನೇಶ್ವರನ ಬಗ್ಗೆ ಮಾತನಾಡಿದರು; ತನುಶ್ರೀ, ಮಾ ಮತ್ತು ಪ್ರಮಾ ಹಾಡಿನ ಮೂಲಕ ರಂಜಿಸಿದರು. ಟ್ರಸ್ಟಿನ ಕಾರ್ಯದರ್ಶಿ ಮತ್ತು ಸಂಸ್ಥೆಯ ಸಂಚಾಲಕರಾಗಿರುವ ಯಸ್. ಚಂದ್ರಶೇಖರ ಭಟ್ ರವರು ಅತಿಥಿಗಳನ್ನು ಪರಿಚಯಿಸಿ, ಅಳಿಕೆ ಸಂಸ್ಥೆ ಹಾಗೂ ಅತಿಥಿಗಳ ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ವಿವರಿಸಿದರು; ಗಣಪತಿಗೆ ಇರುವಂತಹ ಶಕ್ತಿ ಸಾಮರ್ಥ್ಯಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕೆಂದು ಕರೆಕೊಟ್ಟರು. ಬಾಯಾರಿನ ಪ್ರಶಾಂತಿ ವಿದ್ಯಾಕೇಂದ್ರದ ಮೆನೇಜಿಂಗ್‌ ಟ್ರಸ್ಟೀ ಹಾಗು ಕಾಸರಗೋಡಿನ ಶ್ರೀ ಸತ್ಯಸಾಯಿ ಸೇವಾಸಂಸ್ಥೆಗಳ ಜಿಲ್ಲಾಧ್ಯಕ್ಷರೂ ಆಗಿರುವ ಮಹಾಲಿಂಗ ಭಟ್‌ ಹಿರಣ್ಯ ಹಾಗು ಅಳಿಕೆ ಪ್ರಾಥಮಿಕ ಪತ್ತಿನ ಕೃಷಿ ಪತ್ತಿನ ಸಹಕಾರ ಸಂಘ, ಅಳಿಕೆಯ ನಿರ್ದೇಶಕರಾದ ಗೀತಾಲತಾ ಟಿ. ಶೆಟ್ಟಿ ಉಪಸ್ಥಿತರಿದ್ದರು. ಶ್ರೀ ಸ.ಸಾ.ಪ.ಪೂ. ಕಾಲೇಜಿನ ರಸಾಯನಶಾಸ್ತ್ರ ಉಪನ್ಯಾಸಕಿ ಅಮೃತಾ ಎಂ. ನಿರೂಪಿಸಿದರು; ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕರಾದ ರಾಜೇಂದ್ರ ರೈ ಸ್ವಾಗತಿಸಿದರು, ಪ.ಪೂ. ಕಾಲೇಜಿನ ಕನ್ನಡ ಉಪನ್ಯಾಸಕಿ ಸಾಯೀಶ್ವರಿ ವಂದಿಸಿದರು. ಬಳಿಕ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮವು ನಡೆಯಿತು. ಹಿರಿಯ ತ್ಯಾಗಜೀವಿ ಗೌ| ಕೆ.ವಿ. ವೆಂಕಟಲಕ್ಷ್ಮೀ ಹಾಗು ಗೀತಾಲತಾ ಟಿ. ಶೆಟ್ಟಿ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕರಾದ ರಾಜೇಂದ್ರ ರೈ ನಿರೂಪಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!