ಪ್ರತಿವರ್ಷ ಸೆ.15ಕ್ಕೆ “ಇಂಜಿನಿಯರ್ಸ್ ದಿನ” ಆಚರಿಸಲು ಸರಕಾರ ಘೋಷಣೆ
ಬೆಂಗಳೂರು: ಪ್ರತಿ ವರ್ಷ ಸೆ.15ಕ್ಕೆ “ಇಂಜಿನಿಯರ್ಸ್ ದಿನ”ವನ್ನಾಗಿ ಆಚರಿಸುವ ಬಗ್ಗೆ, ಮತ್ತು ಇಂಜಿನಿಯರ್ಗಳ ಹೆಸರುಗಳ ಪೂರ್ವದಲ್ಲಿ Er (Engineer) ಎಂಬ ಶೀರ್ಷಿಕೆಯನ್ನು ಬಳಸಲು ಅನುಮತಿಸಿ ಸರ್ಕಾರ ಆದೇಶ ನೀಡಿದೆ.
ದೇಶದ ಅಭಿವೃದ್ಧಿಯಲ್ಲಿ ಇಂಜಿನಿಯರ್ಸ್ಗಳ ಮಹತ್ವದ ಪಾತ್ರವನ್ನು ಅರಿತು, ಸರ್ ಎಂ.ವಿಶ್ವೇಶ್ವರಯ್ಯ ಅವರು ರಾಷ್ಟ್ರಕೆ ನೀಡಿರುವ ಗಮನಾರ್ಹ ಕೊಡುಗೆಗಳನ್ನು ಗೌರವಿಸಲು ಅವರ ಜನ್ಮದಿನವಾದ ಸೆ.15ನ್ನು “ಇಂಜಿನಿಯರ್ಸ್ ದಿನ’ ವನ್ನಾಗಿ ಆಚರಿಸಿಕೊಂಡುವ ಬರುತ್ತಿರುವುದನ್ನು ಅಧಿಕೃತವಾಗಿ ಘೋಷಿಸಲು ತೀರ್ಮಾನಿಸಿದೆ.
ಇಂಜಿನಿಯರ್‌ಗಳ ಹೆಸರಿನ ಮುಂದೆ “Er” ಬರೆಯಲು ಅನುಮತಿ ಜೊತೆಗೆ ಇಂಜಿನಿಯರ್ಸ್ಗಳ ಕೊಡುಗೆಯನ್ನು ವಿಶಿಷ್ಟ ಚಿಹ್ನೆಯೊಂದಿಗೆ ಗೌರವಿಸಲು ನಿರ್ಧರಿಸಿದ್ದು ಕರ್ನಾಟಕದ ಇಂಜಿನಿಯರ್ ಗಳು ತಮ್ಮ ಹೆಸರಿನ ಮೊದಲು “Er” ಎಂಬ ಪೂರ್ವಪ್ರತ್ಯಯವನ್ನು ಹೆಮ್ಮೆಯಿಂದ ಬಳಸಬಹುದಾಗಿದ್ದು, ಇದು ಕೇವಲ ಎರಡು ಅಕ್ಷರಗಳಾಗಿರದೇ, ಅವರುಗಳ ಜೀವಿತಾವಧಿಯ ಸೇವೆಯನ್ನು ಪ್ರತಿನಿಧಿಸುವುದರಿಂದ ಇಂಜಿನಿಯರ್‌ಗಳ ಹೆಸರುಗಳ ಪೂರ್ವದಲ್ಲಿ Er (Engineer-ಅಭಿಯಂತರರು) ಎಂಬ ಶೀರ್ಷಿಕೆಯನ್ನು ಬಳಸಲು ಸರ್ಕಾರ ತೀರ್ಮಾನಿಸಿದೆ.





