September 8, 2026

ನೆಲ್ಯಾಡಿ: ಅನಾರೋಗ್ಯದಿಂದ 7 ವರ್ಷದ ಬಾಲಕ ಮೃತ್ಯು

0
image_editor_output_image-1969951040-1788849212381

ನೆಲ್ಯಾಡಿ: ಕಳೆದ ಕೆಲ ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕಡಬ ತಾಲೂಕಿನ ಗೋಳಿತ್ತೊಟ್ಟು ಗ್ರಾಮದ ಡೆಬ್ಬೇಲಿ ಗಣೇಶ ನಿವಾಸ ನಿವಾಸಿ ಕುಶಾನ್ ಗೌಡ (7ವ.) ಸೆ.7ರಂದು ಮಧ್ಯಾಹ್ನ ಸ್ವಗೃಹದಲ್ಲಿ ನಿಧನರಾದರು.

ಗೋಳಿತ್ತಟ್ಟು ಸರ್ಕಾರಿ ಉನ್ನತ ಹಿ.ಪ್ರಾ.ಶಾಲೆಯಲ್ಲಿ 2ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ವರ್ಷದ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದು ಚಿಕಿತ್ಸೆ ನೀಡಲಾಗಿತ್ತು.

ಮೃತ ಬಾಲಕ ತಂದೆ ಲೋಹಿತ್ ಗೌಡ, ತಾಯಿಸುಪ್ರಿಯಾ, ಅಜ್ಜವೆಂಕಪ್ಪಗೌಡ, ಅಜ್ಜಿ ಜಾನಕಿ ಅವರನ್ನು ಅಗಲಿದ್ದಾರೆ. ಬಾಲಕನ ಮನೆಗೆ ಗೋಳಿತ್ತಟ್ಟು ಶಾಲೆಯ ಮುಖ್ಯಶಿಕ್ಷಕರು, ಸಹಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು, ಹಲವು ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!