September 8, 2026

ಪ್ರವಾಸಿ ಕೂಟ ವಿಟ್ಲ (ರಿ) ವತಿಯಿಂದ ‘ಮೇರಾ ವತನ್’ ವಿಡಿಯೋ ಸ್ಪರ್ಧೆ: ವಿಜೇತರಿಗೆ ಬಹುಮಾನ ವಿತರಣೆ

0
image_editor_output_image-1459030675-1788786404490

ವಿಟ್ಲ: 80ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಪ್ರವಾಸಿ ಕೂಟ ವಿಟ್ಲ (ರಿ) ವತಿಯಿಂದ ಸಂಘಟನೆಯ ಸದಸ್ಯರ ಮಕ್ಕಳಿಗಾಗಿ ಆಯೋಜಿಸಲಾಗಿದ್ದ ‘ಮೇರಾ ವತನ್’ ವಿಡಿಯೋ ಸ್ಪರ್ಧೆಯಲ್ಲಿ ವಿಜೇತರಾದ ಹಾಗೂ ಭಾಗವಹಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಗೌರವಿಸಲಾಯಿತು.

ಶನಿವಾರ ಸಂಜೆ ಪ್ರವಾಸಿ ಕೂಟ ವಿಟ್ಲ (ರಿ) ಕಚೇರಿಯಲ್ಲಿ ಅಧ್ಯಕ್ಷರಾದ ಮಸೂದ್ ವಿಟ್ಲ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಎರಡು ವಿಭಾಗಗಳಲ್ಲಿ ನಡೆದ ಸ್ಪರ್ಧೆಯ ವಿಜೇತರಾದ ಫಾತಿಮತ್ ಶಾಲಿಮ, ಮುಹಮ್ಮದ್ ನಬೀಲ್, ರಾಫಿಹ್ ಅಯಾನ್ ಹಾಗೂ ಮುಹಮ್ಮದ್ ಝಯಾನ್ ಅವರಿಗೆ ಪ್ರಶಸ್ತಿ ಮತ್ತು ನಗದು ಹಾಗೂ ಉಡುಗೊರೆ ನೀಡಿ ಗೌರವಿಸಲಾಯಿತು.

ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರೋತ್ಸಾಹಿಸಿ, ಮೆಚ್ಚುಗೆಯ ಪ್ರಶಸ್ತಿ ಹಾಗೂ ಉಡುಗೊರೆಯನ್ನು ನೀಡಿ ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ  ವಿಭಾಗ–2ರ ತೀರ್ಪುಗಾರರಾದ ಮುಸ್ತಫಾ ಖಲೀಲ್ ಅವರನ್ನು
ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರವಾಸಿ ಕೂಟ ವಿಟ್ಲ (ರಿ) ಉಪಾಧ್ಯಕ್ಷರಾದ ಶಾಫಿ ಬಹರೇನ್, ಅಬ್ದುಲ್ ಅಜೀಜ್ ಕೆಎಸ್‌ಎ, ಪ್ರಧಾನ ಕಾರ್ಯದರ್ಶಿ ತವಾಝ್, ಯುಎಇ ಸಮಿತಿ ಉಪಾಧ್ಯಕ್ಷರಾದ ಶೇಖ್ ಶಾಕಿರ್, ಮಾಧ್ಯಮ ವಕ್ತಾರರಾದ ಝಕರಿಯಾ ಸಾಲೆತ್ತೂರು ಹಾಗೂ ನವಾಝ್ ಕಡಂಬು, ಪ್ರವಾಸಿ ಕೂಟದ ಸದಸ್ಯರು, ನಿವೃತ್ತ ಅನಿವಾಸಿಗಳು ಹಾಗೂ ಸ್ಫರ್ದೆಯಲ್ಲಿ ಭಾಗವಹಿಸಿದ ಮಕ್ಕಳ ಕುಟುಂಬಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!