September 7, 2026

ಶ್ರೀ ದಿವ್ಯಜ್ಯೋತಿ ಮಿತ್ರವೃಂದ  ಎರುಂಬು ವತಿಯಿಂದ ಕೃಷ್ಣ ಜನ್ಮಾಷ್ಟಮಿಯ ಆಟೋಟ ಸ್ಪರ್ಧೆಗಳು

0
image_editor_output_image-1500298717-1788764692984

ಶ್ರೀ ದಿವ್ಯಜ್ಯೋತಿ ಮಿತ್ರವೃಂದ  ಎರುಂಬು ಇದರ ಶ್ರೀ ಕೃಷ್ಣ ಜನ್ಮಾಷ್ಟಮಿಯ ಆಟೋಟ ಸ್ಪರ್ಧೆಗಳು ಶ್ರೀ ವಿಷ್ಣುಮಂಗಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಎರುಂಬುವಿನಲ್ಲಿ ಜರಗಿತು. ಎರುಂಬು ಶ್ರೀ ವಿಷ್ಣುಮಂಗಲ ದೇವರಿಗೆ ಭಜನಾ ಕಾರ್ಯಕ್ರಮದೊಂದಿಗೆ ಆರಂಭವಾದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಆಟೋಟ ಸ್ಪರ್ಧೆಗಳು ವಿಜೃಂಭಣೆಯಿಂದ ಜರಗಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಮಿತ್ರವೃಂದದ ಹಿರಿಯ ಸದಸ್ಯರಾದ ನಾರಾಯಣ ಎರುಂಬು ಇವರು ನಡೆಸಿಕೊಟ್ಟರು. “

ಕ್ರೀಡೆಯಲ್ಲಿ ಆಸಕ್ತಿ ಶ್ರೀ ಕೃಷ್ಣ ಜನ್ಮಾಷ್ಟಮಿ ಯಂತಹ ಆಟೋಟ ಸ್ಪರ್ಧೆಗಳು ಸಂಘಟನೆಯನ್ನು ಮತ್ತಷ್ಟು ಬಲಪಡಿಸುತ್ತದೆ, ಸೌಹಾರ್ದಯುತವಾದಂತಹ ಬದುಕು ಜನ ಜೀವನಕ್ಕೆ ನೆಮ್ಮದಿಯನ್ನು ತರುತ್ತದೆ” ಎಂದು ಅತಿಥಿಗಳಾಗಿ  ಭಾಗವಹಿಸಿದ ಪ್ರವೀಣ್ ಶೆಟ್ಟಿ ಮೈರ ನುಡಿದರು.  ದಿವ್ಯಜೋತಿ ಮಿತ್ರವೃಂದದ ಗೌರವಾಧ್ಯಕ್ಷರಾದ ಮೋಹನದಾಸ ರೈ ಅವರು ಸ್ವಾಗತಿಸಿ ,ಪ್ರಸ್ತಾವನೆಗೈದರು. ದುಬೈ ನ ಉದ್ಯಮಿ ಹಾಗೂ ಕ್ರೀಡಾ ಪ್ರೇಮಿ ರಶೀದ್ ಮೈರ, ಹಿರಿಯ ಸದಸ್ಯರಾದ ಮಧುಸೂದನ್ ರೈ, ಕ್ರೀಡಾ ಕಾರ್ಯದರ್ಶಿ ರಂಜಿತ್ ಕುಲಾಲ್ ಉಪಸ್ಥಿತರಿದ್ದರು. 

ಬಳಿಕ ಅಂಗನವಾಡಿಯ ವಿದ್ಯಾರ್ಥಿಗಳಿಗೆ, ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗ, ಮತ್ತು ಸಾರ್ವಜನಿಕ ಮಹಿಳೆಯರಿಗೆ ಹಾಗೂ ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳು ಜರಗಿದವು. ಬಳಿಕ ನಡೆದ ಸಮರೋಪ ಸಮಾರಂಭದಲ್ಲಿ ಅತಿಥಿಗಳಾ ಗಿ ಭಾಗವಹಿಸಿದ ಸತ್ಯಸಾಯಿ ವಿದ್ಯಾಸಂಸ್ಥೆಗಳು ಅಳಿಕೆಯ ಹರೀಶ್ ಮೈರ ರವರು “ಒಮ್ಮತದ ಆಟ ಕೂಟಗಳು ಜನರನ್ನು ಸಹಬಾಳ್ವೆ ಮತ್ತು ಸಂಘಟನೆಯಿಂದ ಬದುಕುವಂತೆ ಪ್ರೇರೇಪಿಸುತ್ತದೆ, ಶ್ರೀ ಕೃಷ್ಣ ಜನ್ಮಾಷ್ಟಮಿ ಯಂತಹ ಹಬ್ಬ ಹರಿದಿನಗಳು ಜೊತೆಯಾಗಿ ನಡೆಸಿದರೆ ಸಮಾಜದ ಆರೋಗ್ಯಕರ ಮತ್ತು ಸೌಹಾರ್ದಯುತ ಬದುಕಿಗೆ ಸಹಕಾರಿಯಾಗುತ್ತದೆ” ಎಂದರು. ಹಿರಿಯ ದೈಹಿಕ ಶಿಕ್ಷಕ ಮತ್ತು ಸಂಘದ ಕಾರ್ಯದರ್ಶಿ ಸುರೇಶ್ ವೈ ಎಸ್ , ದೀಪಕ್ ಅಳಿಕೆ, ಚಂದ್ರಹಾಸ ಪುಳಿತ್ತಡಿ ,ನೀರಜಾ ಟೀಚರ್, ವಾಸಪ್ಪ ಕಲ್ಲದಂಬೆ , ಸವಿತಾ ಟೀಚರ್ ಹಾಗೂ ಇತರರು ತೀರ್ಪುಗಾರರಾಗಿ ಸಹಕರಿಸಿದರು.  ಕ್ರೀಡಾಕೂಟದಲ್ಲಿ ಭಾಗವಹಿಸಿ  ಜಯಶಾಲಿಗಳಾದ ಎಲ್ಲಾ ಸ್ಪರ್ಧಾಳುಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಅಪರಾಹ್ನ ಆಗಮಿಸಿದ ಸರ್ವರಿಗೂ ಬೋಜನ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದ ಪ್ರಾರ್ಥನೆಯನ್ನು ಕುಮಾರಿ ವರ್ಷ ರವರು ನೆರವೇರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ರಾಧಾಕೃಷ್ಣ ಎರುಂಬು ನೆರವೇರಿಸಿದರು.

Leave a Reply

Your email address will not be published. Required fields are marked *

error: Content is protected !!