September 7, 2026

ಕರ್ನಾಟಕ   ಕಲ್ಚರಲ್ ಫೌಂಡೇಶನ್ KCF ಅಲ್ ಕಸೀಮ್  ಝೋನ್LEGACY NIGHT -2026ಫ್ಯಾಮಿಲಿ  ಮೀಟ್

0
image_editor_output_image-1238780183-1788764962032

ಬುರೈದ : ದಿನಾಂಕ 03-09-2026 ನೇ ಗುರುವಾರ
KCF ಅಲ್ ಕಸೀಮ್  ಝೋನ್ ವತಿಯಿಂದ LEGACY NIGHT -2026  ಫ್ಯಾಮಿಲಿ  ಮೀಟ್  ಕಾರ್ಯಕ್ರಮ ಬುರೈದ ರೆಸಾರ್ಟ್ ನಲ್ಲಿ  ನಡೆಯಿತು.
ಮಕ್ಕಳ ಕಲಾ  ಪ್ರತಿಭೆ ಅನಾವರಣ , ದಫ್  , ಕವಾಲಿ , ಸೌಹಾರ್ದ ಸಂಗಮ , ಇಸ್ಲಾಮಿಕ್ ಪ್ರಭಾಷಣ , ಅನ್ನದಾನ , ಗೇಮ್ಸ್  ಹೀಗೆ  ಹತ್ತು  ಹಲವಾರು   ಕಾರ್ಯಕ್ರಮವು  ನಡೆಯಿತು.

ಸುಮಾರು  80 ರಷ್ಟು ವಿದ್ಯಾರ್ಥಿ , ವಿದ್ಯಾರ್ಥಿನಿಯರು ಕ್ವಿಜ್  , ಕಿರಾಅತ್ , ಪ್ರವಾದಿ ಮದಹ್ ಗೀತೆ, ಭಾಷಣ , ಕಲರಿಂಗ್ , ಕಾಲಿಗ್ರಫಿ  ಮುಂತಾದ ಸ್ಪರ್ಧಾ ಕಾರ್ಯಕ್ರಮದಲ್ಲಿ  ಭಾಗವಹಿಸಿದರು.

ಬುರೈದ  ಭಾಗದಲ್ಲಿರುವ ವಿವಿಧ ಸಂಘಟನೆಗಳ ಪ್ರತಿನಿಧಿಗಳು , ಸಾಮಾಜಿಕ , ಸಾಮುದಾಯಿಕ , ಶೈಕ್ಷಣಿಕ  ನಾಯಕರನ್ನೊಳಗೊಂಡ ಸೌಹಾರ್ದ ಸಂಗಮ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು Legacy Night-2026 ಸ್ವಾಗತ ಸಮಿತಿ ಚೇರ್ಮನ್  ಅಬ್ದುಲ್ ಖಾದರ್ ಕಣ್ಣಂಗಾರ್ ವಹಿಸಿದರು. ಸೇರಿದವರನ್ನು  ಸ್ವಾಗತ ಸಮಿತಿ ಕನ್ವಿನರ್ ಸಾಲಿಹ್ ಬೆಳ್ಳಾರೆ  ಸ್ವಾಗತಿಸಿದರು. ಕಾರ್ಯಕ್ರಮವನ್ನು KCfF ಸೌದಿ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಅಬ್ದುಲ್ ರಶೀದ್ ಸಖಾಫಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ  ಮುಖ್ಯ ಭಾಷಣಕಾರರಾಗಿ ಆಗಮಿಸಿದ KCF ರಿಯಾದ್ ಝೋನ್ ಕೋಶಾಧಿಕಾರಿ   ಹಬೀಬುಲ್ಲಾ ತೆಕ್ಕಾರ್ KCF ಕಾರ್ಯಾಚರಣೆಯ ಕುರಿತು ಸಭೆಯಲ್ಲಿ ವಿವರಿಸಿದರು.  ಕೊನೆಗೊಂಡಿತು. ಕಾರ್ಯಕ್ರಮದಲ್ಲಿ ಖ್ಯಾತ ಸಮಾಜ ಸೇವಕ , ಹಲವಾರು ಸಂಘಟನೆ , ಸಾಮುದಾಯಿಕ  ಸೇವೆಯಲ್ಲಿ ಗುರುತಿಸಿಕೊಂಡಿರುವ  
ಮುಹಮ್ಮದ್ ಹಾಜಿ ಕುಕ್ಕುವಳ್ಳಿ  ಅವರಿಗೆ
KCF AL QASSIM ZONE INSPIRE AWARD-2026 ನೀಡಿ ಗೌರವಿಸಲಾಯಿತು. ಝೋನ್ ಕಾರ್ಯದರ್ಶಿ  ಶಾಹುಲ್ ಹಮೀದ್ ಮಣ್ಣಾಪು ಅವರ ದನ್ಯವಾದದೊಂದಿಗೆ  ಕಾರ್ಯಕ್ರಮವು ಕೊನೆಗೊಂಡಿತು

ರಿಯಾದ್ KCF ತಂಡದಿಂದ ದಫ್ಫ್ ಮತ್ತು ಕವಾಲಿ  ಪ್ರದರ್ಶನವು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿತು.

ಇಸ್ಲಾಮಿಕ್ ಪ್ರಭಾಷಣ ವೇದಿಕೆಯಲ್ಲಿ  ಕೇರಳ – ಕರ್ನಾಟಕದಲ್ಲಿ  ಸುಪ್ರಸಿದ್ಧರಾಗಿರುವ ಇಸ್ಲಾಮಿಕ್ ಸ್ಕೂಲರ್  ಸುಮಾರು 3000 ದಷ್ಟು ವಿದ್ಯಾರ್ಥಿಗಳು ಕಲಿಯುತ್ತಿರುವ   ಮಲಪ್ಪುರಂ  ನಿಲಂಬೂರು ಮಜಮಹ್ ಸಖಾಫತಿ ಎಂಬ ಸಂಸ್ಥೆಯ ಸಾರಥಿ ಶೈಖುನಾ ಕೂಟಂಬಾರ  ಅಬ್ದುಲ್ ರಹ್ಮಾನ್ ದಾರಿಮಿ ಅವರಿಂದ ಅರ್ಥ  ಗರ್ಭಿತವಾದ ಪ್ರಭಾಷಣವು ನಡೆಯಿತು. ಈ ಕಾರ್ಯಕ್ರಮದ ಅದ್ಯಕ್ಷತೆಯನ್ಮು KCF ಅಲ್ ಕಸೀಮ್  ಝೋನ್ ಅಧ್ಯಕ್ಷರಾದ   ಅಬ್ದುಲ್ ಕರೀಮ್ ಇಮ್ದಾದಿ ವಹಿಸಿದರು. ಕಾರ್ಯಕ್ರಮವನ್ನು ಬುರೈದ ICF ಹಿರಿಯ ನಾಯಕರಾದ ಅಬ್ದುಲ್ ಖಾದರ್ ದಾರಿಮಿ ನಿರ್ವಹಿಸಿದರು. ಡಾ. ಫಾರೂಕ್ ನಈಮಿ ಉಸ್ತಾದರು ಬರೆದ ಹಿಜ್ರಾ ಹೆಜ್ಜೆ ಗುರುತುಗಳು  ಎಂಬ  ಪುಸ್ತಕದ ಕನ್ನಡ ಆವೃತ್ತಿಯ ಬಿಡುಗಡೆಯು ನಡೆಯಿತು.  ಕಳೆದ ವರ್ಷಗಳಲ್ಲಿ ನಮ್ಮಿಂದ  ಅಗಲಿದ  KCF ಕಾರ್ಯಕರ್ತರ ಅನುಸ್ಮರಣೆಯು ನಡೆಯಿತು.
ಝೋನ್ ಸಂಘಟನಾ  ಇಲಾಖೆ ಅಧ್ಯಕ್ಷರಾದ
ಮುಸ್ತಾಫಾ ಲತೀಫಿ ಧನ್ಯವಾದದೊಂದಿಗೆ ಕಾರ್ಯಕ್ರಮವು ಕೊನೆಗೊಂಡಿತು.

ಮಹಿಳೆಯರಿಗೆ cook without fire ಸ್ಪರ್ಧೆ, ಡಿಜಿಟಲ್ ಕ್ವಿಜ್  ನಡೆಯಿತು.
ಪುರುಷರಿಗೆ ಡಿಜಿಟಲ್ ಕ್ವಿಜ್ , ವಾಲಿ ಬಾಲ್  ಪಂದ್ಯಾಟ  , ಹಗ್ಗ ಜಗ್ಗಾಟ ಪಂದ್ಯವು  ನಡೆಯಿತು. ವಾಲಿಬಾಲ್ ಪಂದ್ಯಾಟದಲ್ಲಿ  ಹರಬಿ ಸ್ಪೋರ್ಟ್ಸ್  ಬುರೈದ  ಪ್ರಥಮ ಹಾಗೂ  ಕುಕ್ಕುವಳ್ಳಿ ಫ್ರೆಂಡ್ಸ್  ಬುರೈದ ದ್ವಿತೀಯ ಸ್ಥಾನವನ್ನು  ಪಡೆದುಕೊಂಡಿತು.
ಹಗ್ಗ ಜಗ್ಗಾಟದಲ್ಲಿ  KCF ಸುಲ್ತಾನ ಯೂನಿಟ್ ಪ್ರಥಮ   ಹಾಗೂ ಬರಕಾ ಸ್ವೀಟ್ಸ್ ಬುರೈದ ದ್ವಿತೀಯ ಸ್ಥಾನವನ್ನು  ಪಡೆದುಕೊಂಡಿತು.

ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕವಾಗಿ ನಡೆದ  ಆಕರ್ಷಣೀಯ ಡಿಜಿಟಲ್ ಕ್ವಿಜ್  ಪಂದ್ಯಾಟದಲ್ಲಿ  ಚಿನ್ನದ ನಾಣ್ಯ ಬಹುಮಾನವಾಗಿ ನೀಡಲಾಯಿತು.

Leave a Reply

Your email address will not be published. Required fields are marked *

error: Content is protected !!