September 4, 2026

ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಅಭಿನಂದನ್ ವರ್ಧಮಾನ್ ನಿವೃತ್ತಿ: ಗೋವಾದ ವಿಮಾನಯಾನ ಸಂಸ್ಥೆಗೆ ಪೈಲಟ್ ಆಗಿ ಸೇರ್ಪಡೆ

0
IMG-20260904-WA0034

ಗೋವಾ: ಭಾರತೀಯ ವಾಯುಪಡೆಯ ಮಾಜಿ ವಿಂಗ್‌ ಕಮಾಂಡರ್ ಅಭಿನಂದನ್‌ ವರ್ಧಮಾನ್ ಅವರು ಗೋವಾದ ಪ್ರಾದೇಶಿಕ ವಿಮಾನಯಾನ ಸಂಸ್ಥೆ FLY91ನಲ್ಲಿ ಪೈಲಟ್ ಆಗಿ ಸೇರಿಕೊಂಡಿದ್ದಾರೆ ಎಂದು ಪಿಟಿಐ ತಿಳಿಸಿವೆ.

2019ರ ಫೆಬ್ರುವರಿ 14 ರಂದು ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಬೆಂಗಾವಲು ಪಡೆ ಮೇಲೆ ಉಗ್ರರು ದಾಳಿ ನಡೆಸಿದ್ದರು. ಇದರ ಪರಿಣಾಮ 40 ಯೋಧರು ಹುತಾತ್ಮರಾದರು. ಇದಕ್ಕೆ ಪ್ರತಿಯಾಗಿ ಭಾರತೀಯ ವಾಯುಪಡೆಯು ಫೆಬ್ರುವರಿ 26ರಂದು ಪಾಕಿಸ್ತಾನದ ಬಾಲಾಕೋಟ್‌ನಲ್ಲಿದ್ದ ಜೈಷ್-ಎ-ಮೊಹಮ್ಮದ್ ಉಗ್ರರ ತರಬೇತಿ ಶಿಬಿರದ ಮೇಲೆ ವೈಮಾನಿಕ ದಾಳಿ ನಡೆಸಿತ್ತು.

ಈ ಸರ್ಜಿಕಲ್ ಸ್ಟ್ರೈಕ್‌ನಲ್ಲಿ ವಿಂಗ್‌ ಕಮಾಂಡರ್ ಅಭಿನಂದನ್‌ ವರ್ಧಮಾನ್ ಅವರು ಮಿಗ್-21 ಬೈಸನ್ ಯುದ್ದ ವಿಮಾನದ ಮೂಲಕ ಪಾಕಿಸ್ತಾನದ ಎಫ್‌-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದರು. ಇದೇ ಸಂದರ್ಭದಲ್ಲಿ ಅಭಿನಂದನ್‌ ಅವರಿದ್ದ ಯುದ್ಧವಿಮಾನವೂ ಪತನವಾಗಿತ್ತು. ಆಗ ಯುದ್ದ ವಿಮಾನದಿಂದ ಎಜೆಕ್ಟ್ ಆಗಿದ್ದ ಅವರು ಪ್ಯಾರಾಚೂಟ್ ಮೂಲಕ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಇಳಿದಿದ್ದರಿಂದ ಪಾಕಿಸ್ತಾನ ಸೇನೆಯು ಅವರನ್ನು ಬಂಧಿಸಿತ್ತು. ಮೂರು ದಿನಗಳ ಕಾಲ ಬಂಧನದಲ್ಲಿದ್ದ ಅವರನ್ನು ಭಾರತದ ತೀವ್ರ ರಾಜತಾಂತ್ರಿಕ ಒತ್ತಡಕ್ಕೆ ಮಣಿದು ಪಾಕಿಸ್ತಾನವು ಮಾರ್ಚ್ 1, 2019ರಂದು ಬಿಡುಗಡೆ ಮಾಡಿತ್ತು. ಅವರ ಶೌರ್ಯ ಮತ್ತು ದೇಶಸೇವೆಯನ್ನು ಗೌರವಿಸಿ ಭಾರತ ಸರ್ಕಾರ ಅವರಿಗೆ ವೀರ ಚಕ್ರ ಪ್ರಶಸ್ತಿ ನೀಡಿ ಪುರಸ್ಕರಿಸಿತ್ತು.

Leave a Reply

Your email address will not be published. Required fields are marked *

error: Content is protected !!