ಉಪ್ಪಿನಂಗಡಿ: ಲಾಠಿ ಚಾರ್ಜ್ ವೇಳೆ ಪೊಲೀಸರ ಕೊಲೆ ಯತ್ನ ಪ್ರಕರಣ:
ಇಬ್ಬರು ಆರೋಪಿಗಳ ಬಂಧನ
ಉಪ್ಪಿನಂಗಡಿ: ತಲವಾರು ದಾಳಿ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗಾಗಿ ಉಪ್ಪಿನಂಗಡಿ ಪೊಲೀಸರು ವಶಪಡಿಸಿಕೊಂಡಿದ್ದ ಪಿಎಫ್ ಐ ಮುಖಂಡರನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ಡಿ.14ರಂದು ನಡೆದ ಪ್ರತಿಭಟನೆಯ ಸಂದರ್ಭ ನಡೆದ ಘಟನಾವಳಿಗಳಿಗೆ ಸಂಬಂಧಿಸಿ ಬಂಟ್ವಾಳ ಗ್ರಾಮಾಂತರ ಠಾಣಾ ಉಪ ನಿರೀಕ್ಷಕ ಪ್ರಸನ್ನ ಕುಮಾರ್ ಕೊಲೆಯತ್ನ ಸೇರಿದಂತೆ ಇನ್ನಿತರ ಕಲಂ ನಡಿ ನೀಡಿರುವ ದೂರಿಗೆ ಸಂಬಂಧಿಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ನೆಲ್ಯಾಡಿಯ ಹೊಸಮಜಲಿನ ಜಾಫರ್ ಹಾಗೂ ಕೋಲ್ಪೆಯ ಮಹಮ್ಮದ್ ಆರೀಫ್ ಹುಸೇನ್ ಎನ್ನಲಾಗಿದೆ.
ಇವರನ್ನು ಡಿ.30 ರಂದು ಪೊಲೀಸರು ನೆಲ್ಯಾಡಿಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.