July 24, 2026

ವಿಟ್ಲ: ನೀಟ್ ಹೊರಾಟವನ್ನು ಧಾರ್ಮಿಕವಾಗಿ ಥಳುಕು ಹಾಕಿ, ಅವಹೇಳನಕಾರಿ ಬರಹ ಪ್ರಸಾರ ಮಾಡಿದ ಆರೋಪ: ಕೇಪು ಮೂಲದ ಭರತ್ ಎಂಬಾತನ ಬಂಧನ

0
image_editor_output_image-484303378-1784876038371

ವಿಟ್ಲ: ವಿಟ್ಲ: ನೀಟ್ ಹೊರಾಟವನ್ನು ಧಾರ್ಮಿಕವಾಗಿ ಥಳುಕು ಹಾಕಿ, ಅವಹೇಳನಕಾರಿ ಬರಹ ಪ್ರಸಾರ ಮಾಡಿದ ಆರೋಪದಲ್ಲಿ  ಕೇಪು ಮೂಲದ ಭರತ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಈ ಬಗ್ಗೆ ದೂರು ನೀಡಿದ ವ್ಯಕ್ತಿಯೊಬ್ಬರು KFC KHANDIGA ಎಂಬ ವಾಟ್ಸಾಪ್ ಗ್ರೂಪ್ ನಲ್ಲಿ ಸದಸ್ಯರಾಗಿದ್ದು, ದಿನಾಂಕ:23.07.2026 ರಂದು ಸದ್ರಿ ಗ್ರೂಪ್ ನಲ್ಲಿ ಬಂದ ಸ್ಕ್ರೀನ್ ಶಾಟ್ ವೊಂದನ್ನು ನೋಡಿದಾಗ ಅದರಲ್ಲಿ ಸಮುದಾಯಗಳ ನಡುವೆ ವೈಮನಸ್ಸು ಮೂಡುವಂತೆ ಹಾಗೂ ಸಾರ್ವಜನಿಕರಿಗೆ ಸಾರ್ವಜನಿಕ ನೆಮ್ಮದಿಗೆ ಭಂಗವುಟಾಗುವಂತಹ ಬರಹಗಳಿದ್ದು, ಸದ್ರಿ ಸಂದೇಶವನ್ನು ಪರಿಶೀಲಿಸಲಾಗಿ ಬಂಟ್ವಾಳ ಕೇಪು ಭರತ್ (36) ಎಂಬಾತನು ಸದ್ರಿ ಬರಹಗಳನ್ನು ತನ್ನ ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡಿರುವುದಾಗಿ ತಿಳಿದುಬಂದಿರುತ್ತದೆ.

ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ  ಅ.ಕ್ರ: 160/2026  ಕಲಂ: 197(1)(a), 197(1)(c), 353(2) BNS 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿ, ಆರೋಪಿತ ಭರತ್  ಎಂಬಾತನನ್ನು ದಸ್ತಗಿರಿ ಮಾಡಿ ವಿಚಾರಣೆ ನಡೆಸಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!