ವಿಟ್ಲ: ಕಡಂಬು ಶ್ರೀ ವಿಷ್ಣು ಮೂರ್ತಿ ದೇವಸ್ಥಾನ ಕಡಂಬು ವಿಟ್ಲ ಪಡ್ನೂರು ಪ್ರಸ್ತುತ ಸಿಂಹ ಮಾಸದ ಪ್ರತಿದಿನ ನಡೆಯುತ್ತಿರುವ ವಿಶೇಷ ಪೂಜೆಯ ಸಂದರ್ಭದಲ್ಲಿ
ಬೆಳ್ಳಿಯ ಕವಚ, ನಾಲ್ಕು ಬಾಹುಗಳಲ್ಲಿ ಶಂಖ-ಚಕ್ರ-ಗದೆ-ಪದ್ಮ, ಸುತ್ತಲೂ ಹಳದಿ, ಕೆಂಪು, ಬಿಳಿ ಹೂವಿನ ಹಾರಗಳು ಮತ್ತು ತುಳಸಿ ಅಲಂಕಾರ. ಮೇಲೆ ತೂಗು ಹಾಕಿದ ದೀಪಗಳ ಬೆಳಕಲ್ಲಿ ವಿಜ್ರಂಭಿಸುತ್ತಿರುವ ಶ್ರೀ ವಿಷ್ಣುಮೂರ್ತಿ ದೇವರಿಗೆ ರಂಗ ಪೂಜೆ ದಿನಾಂಕ 17 /9/ 2026ನೇ ನೇ ತಾರೀಖಿನಂದು ಗುರುವಾರದಂದು ಕುಂಟು ಕುಡೆಲು ಶ್ರೀ ರಘುರಾಮ ತಂತ್ರಿಗಳ ನೇತೃತ್ವದಲ್ಲಿ ನಡೆಯುವ ಸಿಂಹ ಮಾಸದ ಕೊನೆಯ ವಿಶೇಷ ಪೂಜೆ ರಾತ್ರಿ 8ಗಂಟೆಗೆ ನಡೆದು ಬಳಿಕ ರಂಗ ಪೂಜೆ ನಡೆಯಲಿದೆ
ರಂಗ ಪೂಜೆಯ ಸೇವಾಕರ್ತರು ಶ್ರೀಮತಿ ಮತ್ತು ಶ್ರೀ ಬಿ ಸಂದೇಶ್ ಶೆಟ್ಟಿ ಬಿಕ್ನಾಜೆ ಮತ್ತು ಮಕ್ಕಳು
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಶ್ರೀದೇವರ ಪ್ರಸಾದ ಹಾಗೂ ಅನ್ನಪ್ರಸಾದವನ್ನು*
( ಅನ್ನಪ್ರಸಾದದ ಸೇವಕರ್ತರು ಬಿ ಸಂದೇಶ್ ಶೆಟ್ಟಿ, ಚಂದ್ರಹಾಸ ಗೌಡ, ಬನ ಗೌತಮ್ ರೈ ಮಾರುಗುಳಿ) ಸ್ವೀಕರಿಸಬೇಕಾಗಿ ವಿನಂತಿಸಿದ್ದಾರೆ.
ಅಧ್ಯಕ್ಷರು ಮತ್ತು ಸರ್ವ ಸದಸ್ಯರು
ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಕಡಂಬು ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





